alex Certify ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅವರಿಂದ ಪರಿಸರ ಪಾಠ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅವರಿಂದ ಪರಿಸರ ಪಾಠ

ನೀವು ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅವರನ್ನು ಟ್ವಿಟ್ಟರ್‌ನಲ್ಲಿ ಅನುಸರಿಸಿದರೆ, ಅವರು ಸಂತೋಷಕರ ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದಾರೆಂದು ನಿಮಗೆ ತಿಳಿಯುತ್ತದೆ. ಅವರ ಪೋಸ್ಟ್‌ಗಳು ಬುದ್ಧಿವಂತಿಕೆ ಮತ್ತು ಹಾಸ್ಯದಿಂದ ಕೂಡಿದೆ ಮತ್ತು ಇದು ನೆಟಿಜನ್‌ಗಳು ಅವರನ್ನು ತುಂಬಾ ಪ್ರೀತಿಸಲು ಕಾರಣವಾಗಿದೆ.

ಅವರು ತಮ್ಮ ಇತ್ತೀಚಿನ ಪೋಸ್ಟ್ ಒಂದರಲ್ಲಿ ಬೀದಿಗಳಲ್ಲಿ ಕಸ ಹಾಕುವುದು ಸರಿ ಎಂದು ಭಾವಿಸುವವರಿಗೆ ಒಂದು ಸಲಹೆ ನೀಡಿದ್ದು ಅದೀಗ ವೈರಲ್​ ಆಗಿದೆ. ಅವರು ಕಸದ ರಸ್ತೆಯ ಚಿತ್ರವನ್ನು ಹಂಚಿಕೊಂಡಿದ್ದು, ಅದರಲ್ಲಿ ಬಲವಾದ ಸಂದೇಶವನ್ನು ನೀಡಿದ್ದಾರೆ.

ನಾಗಾಲ್ಯಾಂಡ್ ಸಚಿವರು ಹಂಚಿಕೊಂಡ ಚಿತ್ರವು ಒಡೆದ ಗಾಜಿನ ಬಾಟಲಿಗಳಿಂದ ತುಂಬಿರುವ ರಸ್ತೆಯನ್ನು ತೋರಿಸುತ್ತದೆ. ಇದು ತುಂಬಾ ಕೆಟ್ಟದ್ದು, ಇದನ್ನು ಮಾಡಬೇಡಿ. ‘ಅತಿಥಿ ದೇವೋ ಭವ’ ಎನ್ನುವುದನ್ನು ನೆನಪಿನಲ್ಲಿ ಇಡಿ. ಸ್ಕ್ರ್ಯಾಪ್ ಬಾಟಲಿಗಳನ್ನು ಹೀಗೆ ಎಸೆಯುವುದು ಆರೋಗ್ಯ ಮತ್ತು ಪರಿಸರಕ್ಕೆ ಹಾನಿಕರ ಎಂದು ಅವರು ಬರೆದಿದ್ದಾರೆ.

ಟ್ವಿಟ್ಟರ್ ಬಳಕೆದಾರ ವಿನಯ್ ಶರ್ಮಾ ಅವರು ಪೋಸ್ಟ್ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಟೆಮ್ಜೆನ್ ಇಮ್ನಾ ಅಲೋಂಗ್ ಅವರು ಈ ಟ್ವೀಟ್ ಮಾಡಿದ್ದಾರೆ. ವಿನಯ್​ ಶರ್ಮಾ ಅವರು ದೆಹಲಿಯಂತಹ ಉತ್ತರ ಭಾರತದ ಜನಪ್ರಿಯ ಗಿರಿಧಾಮಗಳನ್ನು ಕೊಳಕು ಮಾಡುವಲ್ಲಿ ಜನರು ನಿರತರಾಗಿದ್ದಾರೆ ಎಂಬ ಪೋಸ್ಟ್​ ಹಾಕಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...