ಲಂಡನ್: ಹಲವು ವರ್ಷ ಒಂದೇ ಕಡೆ ಕರ್ತವ್ಯ ನಿರ್ವಹಿಸುವ ಶಿಕ್ಷಕರು ನಿವೃತ್ತರಾದಾಗ ಅಥವಾ ಬೇರೆ ಕಡೆ ವರ್ಗಗೊಂಡಾಗ ಅನೇಕ ಸಂದರ್ಭಗಳಲ್ಲಿ ಮಕ್ಕಳು ಕಣ್ಣೀರು ಹಾಕುವುದು ಇದೆ. ಹಲವು ಸಂದರ್ಭದಲ್ಲಿ ಶಿಕ್ಷಕರು ಭಾವುಕರಾಗುವುದು ಇದೆ. ಕರ್ನಾಟಕದಲ್ಲಿಯೇ ಇಂಥ ಎಷ್ಟೋ ಘಟನೆಗಳು ಸಂಭವಿಸಿವೆ. ಆದರೆ ಕೆಲವೊಂದು ಘಟನೆಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ನೆಟ್ಟಿಗರ ಗಮನ ಸೆಳೆಯುತ್ತದೆ.
ಅಂಥದ್ದೇ ಒಂದು ವಿಡಿಯೋ ಇಂಗ್ಲೆಂಡ್ನಿಂದ ಬಂದಿದೆ. 50 ವರ್ಷಗಳ ಸೇವೆಯ ನಂತರ ಮಾಘುಲ್‌ನಲ್ಲಿರುವ ಸೇಂಟ್ ಜಾರ್ಜ್ ಕ್ಯಾಥೋಲಿಕ್ ಪ್ರೈಮರಿ ಸ್ಕೂಲ್ ಶಿಕ್ಷಕಿಯೊಬ್ಬರು ನಿವೃತ್ತರಾಗುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಸಹ ಶಿಕ್ಷಕರು ಭಾವಪೂರ್ವಕ ವಿದಾಯ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕಿಗೆ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಭಾವುಕರಾದ ಅವರನ್ನು ವಿಡಿಯೋದಲ್ಲಿ ನೋಡಬಹುದು.
ರೊಥರ್‌ಹ್ಯಾಮ್ ’50’ ಎಂದು ಹೇಳುವ ಎರಡು ಬಲೂನ್‌ಗಳನ್ನು ಎಲ್ಲರೂ ಹಿಡಿದಿರುವುದನ್ನು ತೋರಿಸುತ್ತದೆ. ಶಿಕ್ಷಕಿ ಗೇಟ್ ತಲುಪುತ್ತಿದ್ದಂತೆ, ಮಕ್ಕಳು ಅವರನ್ನು ತಬ್ಬಿಕೊಳ್ಳುವುದು ಕಂಡುಬರುತ್ತದೆ. “ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ” ಎಂದು ಎಲ್ಲರೂ ಸೇರಿ ಹೇಳುವಾಗ ಶಿಕ್ಷಕಿ ಭಾವುಕರಾಗಿ ಕಣ್ಣೀರು ಹಾಕುವುದು ನೋಡಬಹುದು.