ಆಘಾತಕಾರಿ ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಅಸ್ಸಾಂನ ಲುಮ್ಡಿಂಗ್‌ನಿಂದ ಬಂದ ಯುವಕನನ್ನು ಎರಡು ತುಂಡುಗಳಾಗಿ ಕತ್ತರಿಸಲಾಗಿದೆ.
ವರದಿಗಳ್ರಕಾರ ಯುವಕ ತನ್ನ ತಾಯಿಗೆ ಕರೆ ಮಾಡಿ, “ಮಾ, ದಯವಿಟ್ಟು ನನ್ನನ್ನು ಉಳಿಸಿ, ಅವರು ನನ್ನನ್ನು ಕೊಲ್ಲಲು ಹೊರಟಿದ್ದಾರೆ. ನಾನು ನಿಮ್ಮನ್ನು ಮತ್ತೆ ನೋಡಲು ಸಾಧ್ಯವಾಗುವುದಿಲ್ಲ. ದಯವಿಟ್ಟು ನನ್ನನ್ನು ಉಳಿಸಿ ಮಾ” ಎಂದು ಅಂಗಲಾಚಿದ್ದಾನೆ.
ಉತ್ತರ ಪ್ರದೇಶದ ಗೋರಖ್‌ಪುರದ ರೈಲ್ವೇ ಹಳಿಯಲ್ಲಿ ಟುಟಾನ್ ದೆ ಎಂದು ಗುರುತಿಸಲಾದ ಯುವಕನ ಶವ ಎರಡು ತುಂಡುಗಳಾಗಿ ಪತ್ತೆಯಾಗಿದೆ.
ರೈಲಿನ ಎಸಿ ಕಂಪಾರ್ಟ್‌ಮೆಂಟ್‌ನಲ್ಲಿ ಬೆಡ್‌ರೋಲ್ ಪ್ರೊವೈಡರ್ ಆಗಿ ಟುಟಾನ್ ದೆ ನೇಮಕಗೊಂಡಿದ್ದರು. ಅವರು ಮಾರ್ಚ್ 1 ರಂದು ಲುಮ್‌ಡಿಂಗ್‌ನಿಂದ ದಿಬ್ರುಗಢ್‌ಗೆ ಪ್ರಯಾಣ ಪ್ರಾರಂಭಿಸಿದ್ದರು. ನಂತರ ದಿಬ್ರುಗಢದಿಂದ ದಿಬ್ರುಗಢ್-ಗೋರಖ್‌ಪುರ ವಿಶೇಷ ಹೋಳಿ ರೈಲಿನಲ್ಲಿ ಬೆಡ್‌ರೋಲ್ ಪೂರೈಕೆದಾರರಾಗಿ ಕೆಲಸ ಮಾಡಿದರು.
ಟುಟಾನ್‌ನನ್ನು ರೈಲಿನೊಳಗೆ ಕೊಂದು ಆತನ ಶವವನ್ನು ಗೋರಖ್‌ಪುರ ನಿಲ್ದಾಣದ ರೈಲ್ವೆ ಹಳಿ ಮೇಲೆ ಎಸೆದಿರುವುದಾಗಿ ಮೃತನ ಕುಟುಂಬ ಶಂಕಿಸಿದೆ. ಕೊಲ್ಲುವ ಮೊದಲು, ಟುಟಾನ್ ತನ್ನ ತಾಯಿಗೆ ಕರೆ ಮಾಡಿ ತನ್ನನ್ನು ಹತ್ಯೆ ಮಾಡುತ್ತಿರುವುದಾಗಿ ಮತ್ತು ಈತನನ್ನು ಹೇಗೆ ಕೊಲ್ಲಬೇಕು ಎಂಬ ಬಗ್ಗೆ ಶಂಕಿತರು ಪ್ಲಾನ್ ಮಾಡಿದ್ದಾರೆ ಎಂದು ಹೇಳಿದ್ದರು. ನಿಗೂಢ ಹತ್ಯೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.