![](https://kannadadunia.com/wp-content/uploads/2023/03/a5c58ea1-80dd-4d01-9593-a596e53c69e3.jpg)
ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸುಕೇಶ್ ಚಂದ್ರಶೇಖರ್ ಅಲ್ಲಿಂದಲೇ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಪ್ರೇಮ ಪತ್ರ ಬರೆದಿದ್ದಾನೆ. ಈ ಪ್ರೇಮ ಪತ್ರದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ಈ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಹೆಸರು ಕೂಡಾ ಕೇಳಿ ಬಂದಿದ್ದು, ಈಗಾಗಲೇ ಆಕೆ ಹಲವು ಬಾರಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸಿದ್ದಾರೆ. ಅಲ್ಲದೆ ಶ್ರೀಲಂಕಾ ಮೂಲದ ನಟಿಯ ಪಾಸ್ಪೋರ್ಟ್ ಅನ್ನೂ ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಇದರ ಮಧ್ಯೆ ಹೋಳಿ ಹಬ್ಬಕ್ಕೆ ಶುಭ ಕೋರಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಜೈಲಿನಿಂದಲೇ ಪತ್ರ ಬರೆದಿರುವ ಸುಕೇಶ್ ಚಂದ್ರಶೇಖರ್, ನೀನು ನನ್ನ ದೇವತೆ. ನೀವೊಬ್ಬರು ಮಾನವೀಯ ಮೌಲ್ಯವುಳ್ಳ ಗುಣವಂತೆ ಎಂದು ಬಣ್ಣಿಸಿದ್ದಾನೆ.
ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಅಪಾರವಾಗಿ ಪ್ರೀತಿಸುತ್ತಿರುವ ಸುಕೇಶ್ ಚಂದ್ರಶೇಖರ್, ಆಕೆಗೆ ಕೋಟ್ಯಾಂತರ ಮೌಲ್ಯದ ದುಬಾರಿ ಗಿಫ್ಟ್ ಗಳನ್ನು ನೀಡಿದ್ದ. ಅಲ್ಲದೆ ಪ್ರಕರಣದಲ್ಲಿ ಆಕೆ ನಿರಪರಾಧಿ ಎನ್ನುವ ಮೂಲಕ ರಕ್ಷಿಸಲು ಪ್ರಯತ್ನಿಸಿದ್ದ.
ಆದರೆ ಜಾಕ್ವೆಲಿನ್ ಫರ್ನಾಂಡಿಸ್, ಸುಕೇಶ್ ಚಂದ್ರಶೇಖರ್ ನನ್ನ ಭಾವನೆಗಳೊಂದಿಗೆ ಆಟವಾಡಿದ್ದಾನೆ. ತನ್ನನ್ನು ತಾನು ದೊಡ್ಡ ಉದ್ಯಮಿ ಎಂದು ಆತ ಸುಳ್ಳು ಹೇಳಿ ಪರಿಚಯಿಸಿಕೊಂಡಿದ್ದ. ಆತನಿಂದಾಗಿ ನಾನು ಸಂಕಷ್ಟಕ್ಕೆ ಸಿಲುಕುವಂತಾಯಿತು ಎಂದು ಹೇಳಿದ್ದರು.