ಬೆಂಗಳೂರು: ಇರಾನ್ ಯುವತಿಯೊಬ್ಬರು ತಮ್ಮ ದೇಶದಲ್ಲಿ ರಾಸಾಯನಿಕ ದಾಳಿಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮತ್ತು ಇರಾನ್ ಮಹಿಳೆಯರಿಗೆ ನ್ಯಾಯ ಪಡೆಯಲು ಸಹಾಯ ಮಾಡುವಲ್ಲಿ ಭಾರತದ ಬೆಂಬಲಕ್ಕಾಗಿ ಮನವಿ ಮಾಡಿದ್ದಾರೆ.
ಪ್ರತಿಭಟನಕಾರ ನಿಕೂ, ತನ್ನ ದೇಶದಲ್ಲಿ ನೂರಾರು ಮಹಿಳೆಯರ ಮೇಲೆ ರಾಸಾಯನಿಕಗಳಿಂದ ದಾಳಿ ಮಾಡಲಾಗಿದೆ. ಪ್ರಾಥಮಿಕ ಶಾಲಾ ಮಕ್ಕಳ ಮೇಲೂ ದಾಳಿ ನಡೆಸಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
“ನಾವು ಹಿಜಾಬ್ಗೆ ವಿರೋಧಿಗಳಲ್ಲ. ನಾವು ಬಲವಂತದ ಹಿಜಾಬ್ನ ವಿರುದ್ಧವಾಗಿದ್ದೇವೆ. ನಾವು ಏನು ಧರಿಸಬೇಕೆಂದು ನಾವು ನಿರ್ಧರಿಸಲು ಬಯಸುತ್ತೇವೆ. ಅಲ್ಲಿ ಈ ರೀತಿ ಪ್ರತಿಭಟಿಸಿದರೆ ನನ್ನನ್ನು ಕೊಲ್ಲುತ್ತಾರೆ. ದಾಳಿಗೆ ಒಳಗಾದ ಎಲ್ಲ ಮಹಿಳೆಯರು ನನ್ನ ಸಹೋದರಿಯರು ಮತ್ತು ತಾಯಂದಿರು. ನಮ್ಮ ದೇಹದ ಹಕ್ಕುಗಳ ಬಗ್ಗೆ ನಾವು ಧ್ವನಿ ಎತ್ತಲು ಪ್ರಾರಂಭಿಸುವಂತೆಯೂ ಇಲ್ಲ ಎಂದಿದ್ದಾರೆ.