22ನೇ ಮಹಡಿ ತುದಿಯಲ್ಲಿ ಕೂತಿದ್ದ ಮಾನಸಿಕ ಅಸ್ವಸ್ಥ; ಎದೆ ಝಲ್‌ ಎನಿಸುವಂತಿದೆ ರಕ್ಷಣೆಯ ವಿಡಿಯೋ

ಮುಂಬೈನ ಕಾಂದಿವಲಿ ಹೈರೈಸ್‌ನ 22 ನೇ ಮಹಡಿಯ ಪ್ಯಾರಪೆಟ್ ಗೋಡೆಯಿಂದ ಸುಮಾರು 70 ವರ್ಷ ವಯಸ್ಸಿನ ಒಬ್ಬ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ರಕ್ಷಿಸಲಾಗಿದೆ.

ಅಗ್ನಿಶಾಮಕ ದಳದ ಮಾಹಿತಿಯ ಪ್ರಕಾರ ಮಾನಸಿಕ ಅಸ್ವಸ್ಥ ವ್ಯಕ್ತಿ 32 ಅಂತಸ್ತಿನ ಕಟ್ಟಡದ 22 ನೇ ಮಹಡಿಯಲ್ಲಿ ಸುಮಾರು 4 ಅಡಿಗಳಷ್ಟು ಸುರಕ್ಷತಾ ಗೋಡೆಯ ಮೇಲೆ ಹತ್ತಿ 6 ಅಡಿ ಆಳದ ಪ್ಯಾರಪೆಟ್ ಗೋಡೆಯ ಮೇಲೆ ಇಳಿದಿದ್ದರು.

ಬಳಿಕ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪ್ಯಾರಪೆಟ್ ಗೋಡೆಯ ಮೇಲೆ ಕುಳಿತಿರುವ ಸ್ಥಿತಿಯಲ್ಲಿ ಕಂಡುಬಂದಿದ್ದರು. ಅಗ್ನಿಶಾಮಕ ಸಿಬ್ಬಂದಿ ಸುರಕ್ಷತಾ ಸರಂಜಾಮು, ಹಗ್ಗ ಮತ್ತು ವಿವಿಧ ಸಾಧನಗಳನ್ನು ಬಳಸಿ ಪ್ಯಾರಪೆಟ್ ಗೋಡೆಯ ಮೇಲೆ ಇಳಿದು ಅವರನ್ನು ಸುರಕ್ಷಿತವಾಗಿ ರಕ್ಷಿಸಿದರು.

https://twitter.com/fpjindia/status/1632401671811739651?ref_src=twsrc%5Etfw%7Ctwcamp%5Etweetembed%7Ctwterm%5E1632401671811739651%7Ctwgr%5Ec8265534a453de660be4c70dd5fb4bdc4bbccbfc%7Ctwcon%5Es1_&ref_url=https%3A%2F%2Fwww.freepressjournal.in%2Fmumbai%2Fwatch-70-year-old-mentally-unstable-man-rescued-from-edge-of-22nd-floor-of-kandivali-highrise

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read