alex Certify BIG SHOCKING: ವಿಮಾನದಲ್ಲಿ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿದ ಮತ್ತೊಂದು ಪ್ರಕರಣ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG SHOCKING: ವಿಮಾನದಲ್ಲಿ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿದ ಮತ್ತೊಂದು ಪ್ರಕರಣ ಬಹಿರಂಗ

ಕೆಲ ತಿಂಗಳ ಹಿಂದೆ ವಿಮಾನ ಪ್ರಯಾಣಿಕನೊಬ್ಬ ಕುಡಿತದ ನಶೆಯಲ್ಲಿ ಸಹ ಪ್ರಯಾಣಿಕರಾಗಿದ್ದ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣ ನಡೆದಿತ್ತು. ಮಹಿಳೆ ದೂರು ದಾಖಲಿಸಿದ ಬಳಿಕ ಆ ವ್ಯಕ್ತಿ ಜೈಲಿಗೂ ಸಹ ಹೋಗಿ ಬಂದಿದ್ದರು.

ಇದೀಗ ಅಂತಹುದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ನ್ಯೂಯಾರ್ಕ್ – ನವದೆಹಲಿ ನಡುವೆ ಸಂಚರಿಸುತ್ತಿದ್ದ ಅಮೆರಿಕನ್ ಏರ್ಲೈನ್ಸ್ ಗೆ ಸೇರಿದ ವಿಮಾನದಲ್ಲಿ ಪಾನಮತ್ತನಾಗಿದ್ದ ವಿದ್ಯಾರ್ಥಿಯೊಬ್ಬ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿದ್ದಾನೆ.

ಶುಕ್ರವಾರದಂದು ವಿಮಾನ ಸಂಖ್ಯೆ AA292 ವಿಮಾನದಲ್ಲಿ ಈ ಘಟನೆ ನಡೆದಿದ್ದು, ನ್ಯೂಯಾರ್ಕ್ ನಿಂದ ಹೊರಟ ಈ ವಿಮಾನ 14 ಗಂಟೆ 26 ನಿಮಿಷಗಳ ಪ್ರಯಾಣದ ಬಳಿಕ ಶನಿವಾರ ರಾತ್ರಿ 10.12ರ ಸುಮಾರಿಗೆ ವಿಮಾನ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು.

ಈ ವೇಳೆ ಅಮೆರಿಕ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಮದ್ಯದ ನಶೆಯಲ್ಲಿದ್ದು ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿದ್ದಾನೆ. ಆತ ವಿಮಾನ ಸಿಬ್ಬಂದಿ ಬಳಿ ವಿಚಾರ ತಿಳಿಸಿದಾಗ ಘಟನೆ ಬಹಿರಂಗವಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...