ಪ್ರತಿಭೆಯನ್ನು ಪ್ರದರ್ಶಿಸಲು ಇಂಟರ್ನೆಟ್ ಉತ್ತಮ ವೇದಿಕೆಯಾಗಿದೆ. ಆದರೆ ಕೆಲವೊಮ್ಮೆ ಇಂಟರ್ನೆಟ್ ನಲ್ಲಿ ಚಿತ್ರ ವಿಚಿತ್ರ ವಿಡಿಯೋಗಳೂ ಸಹ ಹರಿದಾಡುತ್ತವೆ. ಕೆಲವರಿಗೆ ಇದು ಇಷ್ಟವಾದರೆ ಮತ್ತೊಬ್ಬರಿಗೆ ಕಿರಿಕಿರಿ ಅನಿಸಬಹುದು. ಅಂಥ ಅಭಿಪ್ರಾಯವೊಂದು ದೆಹಲಿ ಮೆಟ್ರೋ ರೈಲಿನಲ್ಲಿ ನೃತ್ಯ ಮಾಡಿರೋ ಯುವತಿಯ ವಿಡಿಯೋ ಬಗ್ಗೆ ವ್ಯಕ್ತವಾಗಿದೆ.
ಕಿಕ್ಕಿರಿದ ಮೆಟ್ರೋದ ಮಧ್ಯದಲ್ಲಿ ನಿಂತು ನೃತ್ಯ ಮಾಡುತ್ತಿರುವ ಯುವತಿಯ ವಿಡಿಯೋವನ್ನ ಆಕೆಯ ಗೆಳತಿ ರೆಕಾರ್ಡ್ ಮಾಡಿದ್ದಾಳೆ. ಮೆಟ್ರೋದಲ್ಲಿರುವ ಪ್ರಯಾಣಿಕರು ಇದರ ಬಗ್ಗೆ ಹೆಚ್ಚು ಗಮನಿಸದೇ ತಮ್ಮ ಪಾಡಿಗೆ ತಾವಿದ್ದಂತೆ ಕಂಡುಬಂದಿದೆ.
ಆದರೆ ಈ ವಿಡಿಯೋ ಭಾರೀ ವೈರಲ್ ಆಗಿದ್ದು ಹುಡುಗಿಯ ಧೈರ್ಯವನ್ನು ಪ್ರಶಂಸಿಸಬೇಕು ಎಂದು ಕೆಲವರು ಹೇಳಿದ್ದಾರೆ.
ಆದ್ರೆ ಮತ್ತಷ್ಟು ಮಂದಿ ಇದು ಇತರರ ಗಮನ ಸೆಳೆಯುವ ಹತಾಶ ಪ್ರಯತ್ನ ಎಂದು ಕರೆದಿದ್ದಾರೆ.
ಆದಾಗ್ಯೂ, ಸಹ ಪ್ರಯಾಣಿಕರಿಗೆ ತೊಂದರೆಯಾಗದಂತೆ ದೆಹಲಿ ಮೆಟ್ರೋ ಇಂತಹ ಕ್ರಮಗಳಿಗೆ ದಂಡ ವಿಧಿಸಬೇಕು ಎಂದು ಹಲವರು ಸೂಚಿಸಿದ್ದಾರೆ.
https://twitter.com/MajDPSingh/status/1631354682026364928?ref_src=twsrc%5Etfw%7Ctwcamp%5Etweetembed%7Ctwterm%5E1631354682026364928%7Ctwgr%5E46d1957632443d6af481a35e7006a0717d92a08e%7Ctwcon%5Es1_&ref_url=https%3A%2F%2Fwww.timesnownews.com%2Fviral%2Fdelhi-metro-viral-dance-video-girl-dances-inside-delhi-metro-twitter-reacts-article-98407591