ಆಘಾತಕಾರಿ ಘಟನೆಯೊಂದರಲ್ಲಿ ಚೀನಾದ ಕುಟುಂಬವೊಂದು ನಾಯಿಯೆಂದು ಪ್ರಾಣಿಯೊಂದನ್ನು ಸಾಕಿದ್ದರೆ ಆಮೇಲೆ ಗೊತ್ತಾದದ್ದು ಅದು ನಾಯಿ ಅಲ್ಲ, ಬದಲಿಗೆ ಕರಡಿ ಎಂದು….!
ಹೌದು, ಎರಡು ವರ್ಷಗಳಿಂದ ನಾಯಿ ಎಂದೇ ಪ್ರಾಣಿಯನ್ನು ಮುದ್ದಾಗಿ ಬೆಳೆಸುತ್ತಿದ್ದರು. ಆದರೆ ಅದು ಬೆಳೆಯುತ್ತಿದ್ದಂತೆಯೇ ಬೆಳವಣಿಗೆ ಗಮನಿಸಿದಾಗ ಅದು ನಾಯಿ ಅಲ್ಲ ಎಂದು ತಿಳಿಯಿತು. ಕೊನೆಯದಾಗಿ ಪ್ರಾಣಿ ತಜ್ಞರ ಬಳಿ ತೋರಿಸಿದಾಗ ಅದು ನಾಯಿಯಲ್ಲ, ಬದಲಿಗೆ ಅಳಿವಿನಂಚಿನಲ್ಲಿರುವ ಕರಡಿ ಎಂದು ತಿಳಿದುಬಂದಿದೆ.
ಯುನ್ನಾನ್ ಪ್ರಾಂತ್ಯದ ಹಳ್ಳಿಯಲ್ಲಿ ವಾಸಿಸುವ ಸು ಯುನ್, 2016 ರಲ್ಲಿ ರಜೆಯಲ್ಲಿದ್ದಾಗ ಟಿಬೆಟಿಯನ್ ಮಾಸ್ಟಿಫ್ ನಾಯಿಮರಿ ಎಂದು ತಿಳಿದು ಮರಿಯೊಂದನ್ನು ತಂದು ಸಾಕಿದ್ದರು.
ಪ್ರಾಣಿ ಬೆಳೆದಾಗ ಎರಡು ವರ್ಷಗಳ ನಂತರ 250 ಪೌಂಡ್ಗಳು (ಸರಿಸುಮಾರು 114 ಕೆಜಿ) ಬೆಳೆಯಿತು. ಮತ್ತು ಅದು ಎರಡು ಕಾಲುಗಳ ಮೇಲೆ ನಡೆಯಲು ಪ್ರಾರಂಭಿಸಿತು. ಇದನ್ನು ಗಮನಿಸಿದ ಕುಟುಂಬ ಗಾಬರಿಯಿಂದ ತಜ್ಞರ ಬಳಿ ಹೋದಾಗ ಸತ್ಯ ತಿಳಿದಿದೆ. ಇದು ಹಿಮಾಲಯನ್ ಕರಡಿ ಎಂದು ಹೇಳಲಾಗಿದೆ.