ಬೀದಿ ಬದಿಯ ಆಹಾರ ಮಾರಾಟಗಾರನೊಬ್ಬ ತಯಾರಿಸುತ್ತಿರುವ ಕಲಾತ್ಮಕ ದೋಸೆಯ ವಿಡಿಯೋ ವೈರಲ್ ಆಗಿದೆ.
ನಾಂಡಿ ಫೌಂಡೇಶನ್ ನ ಸಿಇಒ ಮನೋಜ್ ಕುಮಾರ್ ಅವರು ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
ಎರಡು ನಿಮಿಷಗಳ ಕ್ಲಿಪ್ ನಲ್ಲಿ, ಬೀದಿ ಆಹಾರ ಮಾರಾಟಗಾರ ತವಾದಲ್ಲಿ ದೋಸೆ ಹಿಟ್ಟನ್ನು ವೃತ್ತಾಕಾರದ ರೀತಿಯಲ್ಲಿ ಹರಡುವುದನ್ನು ಕಾಣಬಹುದು,
ಹೀಗೆ ಹಿಟ್ಟಿನ ಮೇಲೆ ಹಿಟ್ಟನ್ನು ಹಾಕುತ್ತಾ ಅವುಗಳಲ್ಲಿ ವಿವಿಧ ಪ್ರಾಣಿಗಳನ್ನು ಸೃಷ್ಟಿಸುತ್ತಾನೆ. ಮೊದಲು ನಾಯಿ, ಬೆಕ್ಕು ಇತ್ಯಾದಿ ಪ್ರಾಣಿಗಳನ್ನು ದೋಸೆಯಲ್ಲಿ ಕಾಣಬಹುದು.
ನಂತರ ಅವನು ಒಂದು ಚಾಕು ತೆಗೆದುಕೊಂಡು ಬೆಕ್ಕಿನ ಕಣ್ಣು, ಮೂಗು ಮತ್ತು ಬಾಯಿ ಮಾಡುತ್ತಾನೆ. ನಂತರ ಅವನು ದೋಸಾವನ್ನು ಮಡಚಿ ಅದನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸುತ್ತಾನೆ.
ಇದು ಇಂಟರ್‌ನೆಟ್ ಗಮನ ಸೆಳೆದಿದೆ. ಅನೇಕ ಮಂದಿ ಈ ದೋಸೆಯನ್ನು ಮೆಚ್ಚಿಕೊಂಡು ಕಮೆಂಟ್ ಮಾಡುತ್ತಿದ್ದಾರೆ.