ಚಲಿಸುತ್ತಿದ್ದ ಜೀಪ್ ನಿಂದ ಹೊರಗೆ ಜಿಗಿದು ಓರ್ವ ಮಹಿಳೆ ಸಾವನ್ನಪ್ಪಿದರೆ, ಮತ್ತೊಬ್ಬ ಮಹಿಳೆ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ರಾಸ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಗರ್ಹಿಯಾ ರೈಲ್ವೇ ಕ್ರಾಸಿಂಗ್ನಲ್ಲಿ ಚಲಿಸುತ್ತಿದ್ದ ಜೀಪಿನಿಂದ ಮಹಿಳೆಯರು ಜಿಗಿದಿದ್ದರು.
ಪೊಲೀಸರ ಪ್ರಕಾರ, ಮಹಿಳೆಯರು ಇತರ ಪ್ರಯಾಣಿಕರೊಂದಿಗೆ ಶುಕ್ರವಾರ ಪ್ರಯಾಣಿಸುತ್ತಿದ್ದಾಗ ಜೀಪ್ನ ಎಂಜಿನ್ನಿಂದ ಹೊಗೆ ಬರಲು ಪ್ರಾರಂಭಿಸಿತು.
ವಾಹನಕ್ಕೆ ಬೆಂಕಿ ತಗುಲಬಹುದೆಂಬ ಭಯದಿಂದ ಸುಭಾವತಿ ದೇವಿ (50) ಮತ್ತು ಮುನ್ನಿದೇವಿ (45) ಎಂಬುವರು ಅದರಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದರು.
ಮಹಿಳೆಯರನ್ನು ರಾಸ್ರಾದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಸುಭಾವತಿ ಸಾವನ್ನಪ್ಪಿದರೆ ಮುನ್ನಿದೇವಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆ.