ಕುರಿ ಕಾಯುವವನಿಗೆ ಗೊತ್ತಿರುತ್ತೆ ಕುರಿ ಕಾಯುವ ಕಷ್ಟ ಏನು ಅಂತ. ಒಂದು ಕುರಿ ಒಂದು ಕಡೆ ಓಡ್ತಿರುತ್ತೆ. ಇನ್ನೊಂದು ಕುರಿ ಇನ್ನೆಲ್ಲೊ ಓಡಿ ಹೋಗಿ ತಪ್ಪಿಸಿಕೊಂಡಿರುತ್ತೆ. ಕುರಿಗಳ ಹಿಂಡನ್ನ ಒಂದೇ ಕಡೆ ಹಿಡಿದಿಡುವುದೇ ದೊಡ್ಡ ಸವಾಲಿನ ಕೆಲಸ ಆಗಿರುತ್ತೆ.
ಈ ಸಮಸ್ಯೆಗೆ ಪರಿಹಾರವಾಗಿ ಕುರಿಗಾಹಿಯೊಬ್ಬ ಸಖತ್ ಐಡಿಯಾ ಮಾಡಿದ್ದಾನೆ. ಅದನ್ನ ನೋಡಿದವರೊಬ್ಬರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ರೀತಿಯೂ ಕುರಿಗಳನ್ನ ಒಂದು ಕಡೆ ಹಿಡಿದಿಟ್ಟು, ನೆಮ್ಮದಿಯಾಗಿ ಕುರಿ ಮೇಯಿಸಬಹುದು ಅನ್ನೊ ಐಡಿಯಾ ಇರುವ ಈ ವಿಡಿಯೋ ಈಗ ವೈರಲ್ ಆಗಿದೆ.
ಈ ವಿಡಿಯೋ ನೋಡ್ತಿದ್ರೆ ಕುರಿಗಳಿಗೆನೇ z+ ಸೆಕ್ಯೂರಿಟಿ ಕೊಟ್ಟ ಹಾಗಿದೆ. ಕುರಿಗಳ ಹಿಂಡಿನ ಸುತ್ತಲೂ ಒಂದು ಕಬ್ಬಿಣದ ಪಂಜರವನ್ನ, ಕುರಿ ಮೆಯಿಸುವವನು ಹಾಕಿದ್ದಾನೆ. ಅದು ಇದ್ದಿದ್ದರಿಂದ ಕುರಿಗಳು ಒಂದೇ ದಾರಿಯಲ್ಲಿ ಶಿಸ್ತಿನಿಂದ ಸಾಗ್ತಿರುತ್ತೆ. ಇದೇ ಕಬ್ಬಿಣದ ಪಂಜರದ ಕೆಳಗೆ ಚಕ್ರಗಳನ್ನ ಅಳವಡಿಸಿದ್ದಾನೆ. ಅದು ಸುಲಭವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಲು ಅನಕೂಲವಾಗಿದೆ. ಇದೇ ಪಂಜರದ ಮುಂಭಾಗದಲ್ಲಿ ರಿಕ್ಷಾ ರೀತಿಯ ವಾಹನವನ್ನ ಜೋಡಿಸಿ ಕುರಿಗಾಹಿ ನಿಧಾನಕ್ಕೆ ಮುಂದೆ ಮುಂದೆ ಓಡಿಸುತ್ತಾ ಹೋಗುತ್ತಿದ್ದಾನೆ.
ಈ ವ್ಯಕ್ತಿ ಓಡಿಸಿರುವ ತಲೆಯನ್ನ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ಉದ್ಯಮಿ ಹರ್ಷ್ ಗೊಯಂಕಾ ಕೂಡಾ ಬೆರಗಾಗಿದ್ದಾರೆ. ಇವರು ತಮ್ಮ ಅಕೌಂಟ್‌ನಲ್ಲಿ ಈ ವಿಡಿಯೋ ಶೇರ್ ಮಾಡಿ ’ಕಠಿಣ ಸಮಸ್ಯೆಗಳಿಗೆ, ಸುಲಭವಾಧ ಪರಿಹಾರ’ ಅನ್ನೊ ಶೀರ್ಷಿಕೆ ಕೊಟ್ಟಿದ್ದಾರೆ.
ಭಾರತದ ಖ್ಯಾತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಹರ್ಷ್ ಗೊಯಂಕಾ ಈ ರೀತಿಯ ಇಂಟ್ರಸ್ಟಿಂಗ್ ವಿಡಿಯೋಗಳನ್ನ ಆಗಾಗ ಶೇರ್ ಮಾಡಿಕೊಳ್ತಿರುತ್ತಾರೆ. ಈಗ ಈ ವಿಡಿಯೋ ಹಂಚಿಕೊಂಡಿದ್ದು, ಈ ವಿಡಿಯೋವನ್ನ ಈಗಾಗಲೇ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿಲಾಗಿದೆ.