BIG NEWS: ಚೊಚ್ಚಲ ಮಹಿಳಾ ಐಪಿಎಲ್ ಪಂದ್ಯಾವಳಿಗೆ ಇಂದು ಚಾಲನೆ; ಮುಂಬೈನಲ್ಲಿ ನಡೆಯಲಿದೆ ಮೊದಲ ಪಂದ್ಯ

ಐಪಿಎಲ್ ಮಾದರಿಯಲ್ಲಿ ಮಹಿಳಾ ಟಿ20 ಪಂದ್ಯಾವಳಿ ಆರಂಭವಾಗುತ್ತಿದ್ದು, ಮುಂಬೈನಲ್ಲಿ ಇದಕ್ಕೆ ಇಂದು ಚಾಲನೆ ಸಿಗಲಿದೆ. ಮಾರ್ಚ್ 4 ರ ಇಂದಿನಿಂದ ಮಾರ್ಚ್ 26ರ ವರೆಗೆ ಪಂದ್ಯಾವಳಿಗಳು ನಡೆಯಲಿದೆ.

ಮುಂಬೈನಲ್ಲಿ ಇಂದು ಮೊದಲ ಪಂದ್ಯ ನಡೆಯಲಿದ್ದು, ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಸೆಣಸಾಟ ನಡೆಸಲಿವೆ. ಮಹಿಳಾ ಐಪಿಎಲ್ ನಿಂದಾಗಿ ಭಾರತದ ಹಲವು ಮಹಿಳಾ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಲು ಸಹಾಯಕವಾಗುತ್ತದೆ ಎಂದು ಹೇಳಲಾಗಿದೆ.

ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹರ್ಮಾನ್ ಪ್ರೀತ್ ಕೌರ್ ಮುನ್ನಡೆಸಲಿದ್ದರೆ, ಗುಜರಾತ್ ಜಾಯಿಂಟ್ಸ್ ತಂಡದ ನೇತೃತ್ವವನ್ನು ಬೆತ್ ಮೂನೆ ವಹಿಸಲಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಆಟಗಾರರ ಪಟ್ಟಿ ಇಂತಿದೆ: ಹರ್ಮಾನ್ ಪ್ರೀತ್ ಕೌರ್ (ನಾಯಕಿ), ನ್ಯಾಟ್ ಶಿವರ್, ಆಮೇಲಿಯಾ ಕೆರ್, ಪೂಜಾ ವಸ್ತ್ರಾಕರ್, ಎಸ್ಟಿಕಾ ಭಾಟಿಯಾ, ಹೆಥರ್ ಗ್ರಹಾಂ, ಇಸಿ ವಾಂಗ್, ಅಮರ್ಜೋತ್ ಕೌರ್, ಧಾರಾ ಗುಜ್ಜರ್, ಸೈಯಿಕಾ ಇಷಾಕ್, ಯಾಲೆ ಮ್ಯಾಥ್ಯೂಸ್, ಕ್ಲೋ ಟ್ರಯಾನ್, ಹುಮಾರಿಯ ಖಜಿ, ಕೋಮಲ್ ಜಾಂಜಡ್, ಪ್ರಿಯಾಂಕಾ ಬಾಲಾ, ಸೋನಂ ಯಾದವ್, ನೀಲಂ ಬಿಸ್ಟ್ ಮತ್ತು ಜಿಂತಾಮಣಿ ಕಲಿತ

ಗುಜರಾತ್ ಜಾಯಿಂಟ್ಸ್: ಬೆತ್ ಮೂನೆ (ನಾಯಕಿ), ಆಸ್ಟ್ಲೆ ಗಾರ್ಡನರ್, ಸೋಫಿಯಾ ಡಂಕ್ಲಿ, ಅನಾಬೆಲ್ಲಾ ಸದರ್ ಲ್ಯಾಂಡ್, ಅರ್ಲಿನ್ ಡಿಯೋಲ್, ಧಿಯಂದ್ರ ಡಾಟಿನ್, ಮೇಘನಾ, ಜಾರ್ಜಿಯಾ, ಮಾನ್ಸಿ ಜೋಷಿ, ಹೇಮಲತಾ, ಮೋನಿಕಾ ಪಟೇಲ್, ತನುಜಾ ಕನ್ವರ್, ಸ್ನೇಹ ರಾಣಾ (ಉಪ ನಾಯಕಿ), ಸುಷ್ಮಾ ವರ್ಮ, ಅರ್ಲಿ ಗಾಲ,ಅಶ್ವಿನಿ ಕುಮಾರಿ, ಪರುಣಿಕ ಸಿಸೋಡಿಯ ಮತ್ತು ಶಬ್ನಂ ಎಂ.ಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read