ಹಾವೇರಿ: ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಪುತ್ರರಿಗೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ನೆಹರು ಓಲೆಕಾರ್ ಗೆ ಹೈಕೋರ್ಟ್ ನಿಂದ ಬಿಗ್ ರಿಲೀಫ್ ಸಿಕ್ಕಿದೆ.
ಶಾಸಕರು ತಮ್ಮ ಇಬ್ಬರು ಪುತ್ರರಾದ ಮಂಜುನಾಥ್ ಹಾಗೂ ದೇವರಾಜ್ ಓಲೇಕಾರ್ ಅವರಿಗೆ 50 ಲಕ್ಷದ ಕಾಮಗಾರಿಯನ್ನು ನೀಡಿದ್ದಕ್ಕಾಗಿ ಜನಪ್ರತಿನಿಧಿಗಳ ಕೋರ್ಟ್ 2 ವರ್ಷ ಶಿಕ್ಷೆ ವಿಧಿಸಿತ್ತು.
ಇದನ್ನು ಪ್ರಶ್ನಿಸಿ ಶಾಸಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಜನಪ್ರತಿನಿಧಿಗಳ ನ್ಯಾಯಾಲಯ ನೀಡಿದ್ದ 2 ವರ್ಷದ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟಿರುವ ಹೈಕೋರ್ಟ್, ಶಾಸಕರಿಗೆ ಜಾಮೀನು ನೀಡಿದೆ.