ಕಳೆದು ಹೋಗಿದ್ದ ನಾಯಿಯೊಂದು ರೈಲಿಗೆ ಢಿಕ್ಕಿ ಹೊಡೆದು 10 ದಿನಗಳ ನಂತರ ಮನೆಗೆ ಹಿಂದಿರುಗಿದ ಘಟನೆ ನಡೆದಿದೆ. ಕಾಣೆಯಾದ ಬೀಗಲ್ ತನ್ನ ಮಾಲೀಕರ ತೋಟದಿಂದ ಓಡಿಹೋದಾಗ ಕೆಂಟ್ನ ಟನ್ಬ್ರಿಡ್ಜ್ ವೆಲ್ಸ್ನಲ್ಲಿ ಈ ಘಟನೆ ನಡೆದಿದೆ.
ವರದಿಯ ಪ್ರಕಾರ, 2 ವರ್ಷದ ರೋನಿ ಪಟಾಕಿಗಳ ಭಯದಿಂದ ತನ್ನ ಮಾಲೀಕರ ಮನೆಯಿಂದ ಓಡಿಹೋಗಿತ್ತು. ರೋನಿಯನ್ನು ಪತ್ತೆ ಮಾಡಲು ಮಾಲೀಕರು ನಾಯಿಯ ಫೋಟೋ ಮತ್ತು ವಿವರಣೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದರು.
ನಂತರ ರೈಲು ಚಾಲಕರೊಬ್ಬರು ಇದನ್ನು ನೋಡಿ ಇಂಥದ್ದೇ ನಾಯಿ ತಮ್ಮ ರೈಲಿಗೆ ಡಿಕ್ಕಿಯಾಗಿದ್ದನ್ನು ಹೇಳಿದ್ದರು. ಹಳಿಗಳ ಮೇಲೆ ನಾಯಿ ಮಲಗಿದ್ದನ್ನು ನೋಡಿದ್ದು ರೈಲಿಗೆ ಅದು ಡಿಕ್ಕಿ ಹೊಡೆದಿದೆ ಎಂದರು.
ನಾಯಿ ಸತ್ತೇ ಹೋಗಿದೆ ಎಂದು ಮಾಲೀಕರು ಭಾವಿಸಿದ್ದರೆ, 10 ದಿನಗಳ ಬಳಿಕ ಅದು ತೋಟದ ಮನೆಗೆ ವಾಪಸ್ ಬಂದಿದೆ. ಇದನ್ನು ನೋಡಿ ದಂಪತಿ ಭಾವುಕರಾಗಿದ್ದು ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ. ನಾಯಿ ವಾಪಸ್ ಸಿಕ್ಕಿದುದ್ದಕ್ಕೆ ನೆಟ್ಟಿಗರು ಅಭಿನಂದನೆ ಸಲ್ಲಿಸುತ್ತಿದ್ದಾರೆ.