alex Certify ತಾಲೀಮಿನ ಬಳಿಕ ಸೇವಿಸಿದ ಬ್ರೆಡ್‌ ಸ್ಲೈಸ್‌ ಸಿಲುಕಿ ಯುವ ಬಾಡಿಬಿಲ್ಡರ್‌ ಸಾವು; ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಲೀಮಿನ ಬಳಿಕ ಸೇವಿಸಿದ ಬ್ರೆಡ್‌ ಸ್ಲೈಸ್‌ ಸಿಲುಕಿ ಯುವ ಬಾಡಿಬಿಲ್ಡರ್‌ ಸಾವು; ಇದರ ಹಿಂದಿದೆ ಈ ಕಾರಣ

ತಾಲೀಮು ವಿರಾಮದ ಸಮಯದಲ್ಲಿ ಸೇವಿಸಿದ ಬ್ರೆಡ್ ಸ್ಲೈಸ್ ಗಂಟಲಿಗೆ ಸಿಲುಕಿದ ನಂತರ ತಮಿಳುನಾಡಿನ 21 ವರ್ಷದ ಬಾಡಿಬಿಲ್ಡರ್ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಕಡಲೂರಿನಲ್ಲಿ ನಡೆಯಲಿದ್ದ ರಾಜ್ಯ ಮಟ್ಟದ ದೇಹದಾರ್ಢ್ಯ ಚಾಂಪಿಯನ್‌ಶಿಪ್‌ನಲ್ಲಿ 70 ಕೆಜಿಯೊಳಗಿನ ವಿಭಾಗದಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದ ಅವರು, ಬ್ರೆಡ್‌ ಸ್ಲೈಸ್‌ ಸಿಲುಕಿಕೊಂಡ ಪರಿಣಾಮ ಉಸಿರಾಡಲು ಸಾಧ್ಯವಾಗದೆ ಮೂರ್ಛೆ ಹೋಗಿದ್ದರು.

ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಇನ್ನು ಈ ಕುರಿತಂತೆ ಮಾತನಾಡಿರುವ ಬಾತ್ರಾ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಡಾ. ಪಂಕಜ್ ರಮೇಶ್ ಬಾತ್ರಾ, ಈ ಘಟನೆಯು ಎರಡು ಸಾಧ್ಯತೆಗಳಿಂದ ಸಂಭವಿಸಿರಬಹುದು ಎಂದು ಹೇಳಿದ್ದಾರೆ.

ಆಹಾರದ ಪೈಪ್ ಬದಲಿಗೆ ಬ್ರೆಡ್‌ ಸ್ಲೈಸ್ ಗಾಳಿಯ ಕೊಳವೆಗೆ ಹೋಗಿರಬಹುದು ಅಥವಾ ಹೈಪರ್ಟ್ರೋಫಿಕ್ ಅಬ್ಸ್ಟ್ರಕ್ಟಿವ್ ಕಾರ್ಡಿಯೊಮಿಯೋಪತಿ‌ (HOCM) ಕಾರಣಕ್ಕಾಗಿರಬಹುದು ಎಂದಿದ್ದಾರೆ.

“HOCM ನಲ್ಲಿ, ಹೃದಯ ಸ್ನಾಯು ದಪ್ಪವಾಗುತ್ತದೆ, ಹೃದಯವು ರಕ್ತವನ್ನು ಪಂಪ್ ಮಾಡಲು ಕಷ್ಟವಾಗುತ್ತದೆ. ಇದು ಹಠಾತ್ ಸಾವಿಗೆ ಕಾರಣವಾಗಬಹುದು” ಎಂದು ಡಾ ಬಾತ್ರಾ ಹೇಳಿದ್ದಾರೆ.

ಪ್ರಕರಣದಲ್ಲಿ ಶವಪರೀಕ್ಷೆ ವರದಿಗಾಗಿ ಇನ್ನೂ ಕಾಯುತ್ತಿದ್ದರೂ, ಸಂಭವನೀಯ ಕಾರಣ HOCM ಎಂದು ತೋರುತ್ತದೆ ಅವರು ಅವರು ತಿಳಿಸಿದ್ದಾರೆ.

ತಾಲೀಮು ಹತ್ತಿರದಲ್ಲಿ ಅಥವಾ ಮಧ್ಯದಲ್ಲಿ ತಿನ್ನುವುದು ಅಸ್ವಸ್ಥತೆ, ಸೆಳೆತ ಮತ್ತು ವಾಕರಿಕೆಗೆ ಕಾರಣವಾಗಬಹುದು. ಹೀಗಾಗಿ ವ್ಯಾಯಾಮಕ್ಕೂ ಮುನ್ನ ಕನಿಷ್ಠ 30 ನಿಮಿಷದಿಂದ ಒಂದು ಗಂಟೆ ಮೊದಲು ಊಟ ಅಥವಾ ತಿಂಡಿ ತಿನ್ನುವುದು ಸೂಕ್ತ ಎನ್ನುತ್ತಾರೆ ಉಜಾಲಾ ಸಿಗ್ನಸ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಸಂಸ್ಥಾಪಕ ನಿರ್ದೇಶಕ ಡಾ. ಶುಚಿನ್ ಬಜಾಜ್.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...