SHOCKING: ಪಿಟ್ ಬುಲ್ ನಾಯಿಯಿಂದ ಭೀಕರ ದಾಳಿಗೊಳಗಾದ ಬಾಲಕಿಯ ಮುಖಕ್ಕೆ 1,000 ಹೊಲಿಗೆ

ಅಮೆರಿಕದಲ್ಲಿ ಆರು ವರ್ಷದ ಬಾಲಕಿ ಮೇಲೆ ಪಿಟ್ ಬುಲ್ ನಾಯಿ ಭೀಕರವಾಗಿ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಮುಖಕ್ಕೆ 1 ಸಾವಿರ ಹೊಲಿಗೆ ಹಾಕಲಾಗಿದೆ.

ಫೆಬ್ರವರಿ 18 ರಂದು ಚೆಸ್ಟರ್‌ವಿಲ್ಲೆಯಲ್ಲಿ ಲಿಲಿ ಎಂಬ ಬಾಲಕಿ ನೆರೆಹೊರೆಯವರ ಮನೆಯಲ್ಲಿ ಸ್ನೇಹಿತನೊಂದಿಗೆ ಆಟವಾಡುತ್ತಿದ್ದಾಗ ದಾಳಿ ನಡೆದಿದೆ.

ಆ ಸಮಯದಲ್ಲಿ ಸ್ನೇಹಿತನ ತಾಯಿ ಹೆಣ್ಣು ಪಿಟ್ ಬುಲ್ ನಾಯಿ ನೋಡಿಕೊಳ್ಳುತ್ತಿದ್ದರು. ದಾಳಿಗೊಳಗಾದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಪೋಷಕರೊಂದಿಗೆ ಬೋಸ್ಟನ್‌ನಲ್ಲಿರುವ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ನೀಡಿ ಹೊಲಿಗೆ ಹಾಕಲಾಗಿದೆ.

ಲಿಲಿ ಮೇಜಿನ ಬಳಿ ಕುಳಿತ ವೇಳೆ ನಾಯಿ ಏಕಾಏಕಿ ದಾಳಿ ಮಾಡಿ ಕಚ್ಚಿದೆ. ಶಸ್ತ್ರಚಿಕಿತ್ಸೆಯ ನಂತರ ಲಿಲಿ ಮಾತನಾಡಲು ಸಾಧ್ಯವಾಗುವುದಿಲ್ಲ. ಲಿಲಿಯ ಲಾಲಾರಸ ಗ್ರಂಥಿಗಳು ಕೆಲಸ ಮಾಡುತ್ತಿಲ್ಲ. ಸ್ನಾಯುಗಳು ತುಂಬಾ ಹಾನಿಗೊಳಗಾಗಿವೆ ಎಂದು ಲಿಲಿಯ ತಾಯಿ ಡೊರೊಥಿ ನಾರ್ಟನ್ ತಿಳಿಸಿದ್ದಾರೆ.

ಅವಳ ಕಣ್ಣುಗಳ ಕೆಳಗಿನಿಂದ ಅವಳ ಗಲ್ಲ ಮುಖದ ಮೇಲೆ 1,000 ಕ್ಕೂ ಹೆಚ್ಚು ಹೊಲಿಗೆಗಳನ್ನು ಹಾಕಲಾಗಿದೆ. ಕನಿಷ್ಠ ಒಂದು ವಾರದವರೆಗೆ ನಿದ್ರಾಜನಕ ನೀಡಲಾಗುವುದು. ಉಸಿರಾಟದ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read