ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ. ರೂಪಾ ಮತ್ತೆ ಪೋಸ್ಟ್ ಹಾಕಿದ್ದಾರೆ.
ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿ ರೋಹಿಣಿ ಸಿಂಧೂರಿ ಅವರನ್ನು ಪ್ರಶ್ನಿಸಿದ್ದಾರೆ.
ಮೈಸೂರು ಎಟಿಐನಿಂದ ರೋಹಿಣಿ ಸಿಂಧೂರಿ ಅವರು ಸರ್ಕಾರಿ ಸಾಮಾನುಗಳನ್ನು ತೆಗೆದುಕೊಂಡಿದ್ದಾರೆ. ಮತ್ತು ಡಿಸಿ ಮನೆಯಲ್ಲಿ ಇಲ್ಲ, ಎಲ್ಲಿ ಹೋದರು ಎಂದು ಸಿಂಧೂರಿ ಅವರಿಗೆ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ. ಇದರ ಮೇಲೆ ಕ್ರಮ ಆಯಿತೇ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರಿ ವಸ್ತು 50 ರೂಪಾಯಿ ಇರಲಿ, 50 ಕೋಟಿ ರೂ. ಇರಲಿ, ತಪ್ಪು ತಪ್ಪೇ. 1000 ರೂಪಾಯಿ ಲಂಚ ತೆಗೆದುಕೊಂಡವರು ಕೂಡ ಲೋಕಾಯುಕ್ತ ವಿಚಾರಣೆಗೆ ಒಳಗಾಗಿದ್ದಾರೆ. ಕಾನೂನು ಡಿಸಿ ಹೂ ಗುಮಸ್ತನಿಗೂ ಒಂದೇ.
ಮಾನ್ಯ ಎಂಎಲ್ಎ ಪ್ರಕಾರ ಕೋವಿಡ್ ನಿಂದಾದ ಸಾವಿನ ಬಗ್ಗೆ ಮುಚ್ಚಿಟ್ಟಿದ್ದರು. ಕೊರೋನಾ ಸಂದರ್ಭದಲ್ಲಿ ಆದ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿದ್ದರು. ಸಾವಿನ ಸಂಖ್ಯೆ ಏಕೆ ಮುಚ್ಚಿಟ್ಟಿದ್ದರು? ಇದರ ವಿರುದ್ಧ ಕ್ರಮ ಆಯಿತೇ ರೋಹಿಣಿ ಸಿಂಧೂರಿ ಅವರನ್ನು ಡಿ. ರೂಪಾ ಪ್ರಶ್ನಿಸಿದ್ದಾರೆ.
https://www.facebook.com/roopad.moudgil?__cft__[0]=AZU1VRQ0eMCdLvVYqv6IDhxW7xW6adErAq3pM7jrk0x-Xktx-Kd5xICILw4uw3_t8fEy0sw6Ty414I-RqQEMuoCIa37zWprPFakQ2Zu4dUeOwY9O0qogtS101ohlsdR_l-puw8–bgSAe1BSGLcG8AL3&__tn__=-UC%2CP-R