ಹುಬ್ಬಳ್ಳಿ: ಹಾಸನ ಜೆಡಿಎಸ್ ಟಿಕೆಟ್ ಬಡಿದಾಟಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದಳಪತಿಗಳ ಕಾಲೆಳೆದಿದ್ದಾರೆ. ಅವರಿಗೆ ಮನೆಯನ್ನೇ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಟಿಕೆಟ್ ಗಾಗಿ ಬಡಿದಾಡುತ್ತಿದ್ದಾರೆ. ಇನ್ನು ರಾಜ್ಯವನ್ನು ಹೇಗೆ ನಿರ್ವಹಣೆ ಮಾಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ದಳಪತಿಗಳು ಮೊದಲು ಮನೆ ಸರಿ ಮಾಡಿಕೊಳ್ಳಿ, ಆಮೇಲೆ ರಾಜ್ಯ ಆಳೋಕೆ ಬನ್ನಿ ಎಂದು ಹೇಳಿದ್ದಾರೆ. ಮನೆಯವರೆಲ್ಲ ಎಲೆಕ್ಷನ್ ಗೆ ನಿಂತರೂ ಸಮಾಧಾನವಾಗಿಲ್ಲ. ಮನೆಯಲ್ಲಿಯೇ ಟಿಕೆಟ್ ಗಾಗಿ ಬಡಿದಾಟ. ಕುಟುಂಬದ ಸಮಸ್ಯೆಯನ್ನೇ ಬಗೆಹರಿಸಲಾಗದವರು ಇನ್ನು ರಾಜ್ಯ ಹೇಗೆ ನಿರ್ವಹಣೆ ಮಾಡ್ತಾರೆ ಎಂದು ಕೇಳಿದ್ದಾರೆ.
ಕೆಲ ರಾಷ್ಟ್ರಗಳಲ್ಲಿ ಒಂದೇ ಸಮುದಾಯದವರಿದ್ದರೂ, ಜಾತಿ ಜಾತಿ ನಡುವೆಯೇ ಹೊಡೆದಾಟಗಳು ಆಗುತ್ತವೆ. ಹಾಗೇ ಮನೆಯವರಿಗೆಲ್ಲ ಟಿಕೆಟ್ ಕೊಟ್ಟರೂ ಯಾಕೆ ಬಡಿದಾಡ್ತಿದ್ದಾರೆ? ಮೊದಲು ಮನೆ ನಿರ್ವಹಣೆ ಮಾಡಿಕೊಳ್ಳಲಿ ಎಂದು ಕೌಂಟರ್ ಕೊಟ್ಟಿದ್ದಾರೆ.