ಪಶ್ಚಿಮ ಬಂಗಾಳದ ಜಲ್ದಾಪಾರ ನ್ಯಾಷನಲ್ ಪಾರ್ಕ್ ನಲ್ಲಿ ಸಫಾರಿಗೆಂದು ಬಂದಿದ್ದ ಪ್ರವಾಸಿಗರಿದ್ದ ಜೀಪ್ ಮೇಲೆ ಎರಡು ಘೇಂಡಾ ಮೃಗಗಳು ದಾಳಿ ನಡೆಸಿವೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ವಾಹನ ಪಲ್ಟಿಯಾಗಿದೆ.
ಹಾಲಿಪುರ ದೌರ್ ಏರಿಯಾದಲ್ಲಿ ಈ ಘಟನೆ ನಡೆದಿದ್ದು, ಡ್ರೈವರ್ ಸೇರಿದಂತೆ ಆರು ಮಂದಿ ಪ್ರವಾಸಿಗರು ಇದ್ದ ಸಫಾರಿ ಜೀಪನ್ನು ಘೇಂಡಾ ಮೃಗಗಳು ಬೆನ್ನಟ್ಟಿವೆ.
ಈ ಸಂದರ್ಭದಲ್ಲಿ ವಾಹನ ಚಾಲಕ ತಪ್ಪಿಸಿಕೊಳ್ಳಲು ರಿವರ್ಸ್ ನಲ್ಲಿ ಚಾಲನೆ ಮಾಡಿದ್ದು, ಆಗ ವಾಹನ ಪಲ್ಟಿಯಾಗಿದೆ. ಇದರ ಪರಿಣಾಮ ಪ್ರವಾಸಿಗರು ಸೇರಿದಂತೆ ಏಳು ಮಂದಿಯೂ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಮದಾರಿಯಾತ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಅಪಾಯವಾಗಿಲ್ಲ. ಘೇಂಡಾ ಮೃಗಗಳು ಸಫಾರಿ ಜೀಪ್ ಬೆನ್ನಟ್ಟಿರುವ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಆಕಾಶ್ ದೀಪ್ ಬದ್ವಾನ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಅದು ಈಗ ವೈರಲ್ ಆಗಿದೆ.