ಊಟ, ತಿಂಡಿ ತಿನ್ನಬೇಕು ಎಂದ ತಕ್ಷಣ ಕೆಲವರಿಗೆ ಸ್ಪೂನ್ ಅಥವಾ ಚಮಚ ಇರಲೇಬೇಕು. ಅದು ಹೈಜೀನ್ ಸಂಕೇತ ಎಂಬ ಭಾವನೆ. ಆದರೆ ನಾವು ಸ್ಪೂನ್ ಬಳಸದೆ ನಮ್ಮ ಕೈಗಳಿಂದಲೇ ಊಟ, ತಿಂಡಿ ತಿನ್ನುವುದು ಎಷ್ಟು ಒಳ್ಳೆಯದು ಗೊತ್ತಾ?
ನಮ್ಮ ಐದು ಬೆರಳುಗಳು ಪಂಚಭೂತಗಳ ಸಂಕೇತ. ಈ ಇಡೀ ದೇಹವೇ ಪಂಚತತ್ವಗಳಿಂದ ಆಗಿದೆ ಎಂಬ ನಂಬಿಕೆ ಇದೆ. ಆಕಾಶ, ಭೂಮಿ ನೀರು, ವಾಯು, ಅಗ್ನಿ ತತ್ವವೇ ಆ ಪಂಚ ಮಹಾಭೂತಗಳು.
ನಮ್ಮ ಐದು ಕೈ ಬೆರಳುಗಳು ಪಂಚಮಹಾಭೂತಗಳ ಸಂಕೇತ. ಹಾಗಾಗಿ ಈ ಐದು ತತ್ವಗಳನ್ನು ಸೇರಿಸಿ ಅಂದರೆ ಐದು ಬೆರಳುಗಳನ್ನು ಸೇರಿಸಿ ಆಹಾರ ಸೇವನೆ ಮಾಡುವುದರಿಂದ ಆರೋಗ್ಯ ಕೂಡ ವೃದ್ಧಿಯಾಗುತ್ತದೆ. ಇನ್ನೂ ಊಟಕ್ಕೆ ಸ್ಪೂನ್ ಮುಟ್ಟುವ ಮೊದಲು ಈ ವಿಷಯಗಳನ್ನು ಮರೆಯದೆ ನೆನಪು ಮಾಡಿಕೊಳ್ಳಿ.