ಇದೀಗ ಟಾಪ್ – 25 ಶ್ರೀಮಂತರ ಪಟ್ಟಿಯಿಂದಲೂ ಗೌತಮ್ ಅದಾನಿ ಔಟ್….!

ಕೆಲ ದಿನಗಳ ಹಿಂದಷ್ಟೇ ವಿಶ್ವ ಸಿರಿವಂತರ ಪಟ್ಟಿಯಲ್ಲಿ ಮೂರನೇ  ಹಾಗೂ ಭಾರತದ ಅತಿ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಗೌತಮ್ ಅದಾನಿ ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ವರದಿ ಬಿಡುಗಡೆ ಮಾಡಿದ ಬಳಿಕ ಅವರ ಸ್ಥಾನ ಕುಸಿಯುತ್ತಲೇ ಇದೆ.

ಅದಾನಿ ಸಮೂಹದ ಷೇರುಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಕಾಣುತ್ತಿದ್ದು, ಬುಧವಾರ ಒಂದೇ ದಿನ ಗೌತಮ್ ಅದಾನಿ ಅವರ ಸಂಪತ್ತು 43.40 ಶತಕೋಟಿ ಡಾಲರ್ ಗಳಷ್ಟು ಕುಸಿತ ಕಂಡಿದೆ. ಹೀಗಾಗಿ ಇದೀಗ ಗೌತಮ್ ಅದಾನಿ ಟಾಪ್ 25 ಶ್ರೀಮಂತರ ಪಟ್ಟಿಯಿಂದ ಹೊರ ಬಿದ್ದಿದ್ದಾರೆ.

ಗೌತಮ್ ಅದಾನಿ ಈಗ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 26ನೇ ಸ್ಥಾನದಲ್ಲಿದ್ದು, ನೈಕಿಯ ಫಿಲ್ ನೈಟ್ ಮತ್ತು ಕುಟುಂಬ ಈಗ 25ನೇ ಸ್ಥಾನಕ್ಕೆ ತಲುಪಿದೆ. ಇದರ ಮಧ್ಯೆ ಗೌತಮ್ ಅದಾನಿ ಒಡೆತನದ ಕಂಪನಿಗೆ ಶ್ರೀಲಂಕಾ ಸರ್ಕಾರ ಎರಡು ಪವನ ವಿದ್ಯುತ್ ಸ್ಥಾವರ ಸ್ಥಾಪನೆಗೆ ಅನುಮತಿ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read