ನೆರೆ ರಾಷ್ಟ್ರ ಪಾಕಿಸ್ತಾನ ಇನ್ನಿಲ್ಲದಂತೆ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು ಆ ದೇಶದ ಜನಸಾಮಾನ್ಯರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಪೆಟ್ರೋಲ್ – ಡೀಸೆಲ್ ಬೆಲೆ ಮುಗಿಲು ಮುಟ್ಟಿದ್ದು, ಆಹಾರ ಸಾಮಗ್ರಿ ಹಾಗೂ ಅಗತ್ಯ ವಸ್ತುಗಳಿಗೆ ಹಾಹಾಕಾರ ಮುಗಿಲು ಮುಟ್ಟಿದೆ. ಹೀಗಾಗಿ ಜನ ಬೀದಿಗಿಳಿದು ಪಾಕಿಸ್ತಾನದ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಎಲ್ಲ ಸಮಸ್ಯೆಗಳಿಂದ ಬಳಲುತ್ತಿರುವ ಪಾಕಿಸ್ತಾನದ ಪ್ರಜೆಗಳು, ಭಾರತದಲ್ಲಿ ಆಶ್ರಯ ಪಡೆದರೂ ಪರವಾಗಿಲ್ಲ. ಈ ದೇಶದಿಂದ ಜೀವಂತವಾಗಿ ಹೋದರೆ ಸಾಕು ಎಂಬ ಮನೋಭಾವ ಹೊಂದಿದ್ದು, ಇದರ ಮಧ್ಯೆ ಪತ್ರಕರ್ತೆಯೊಬ್ಬರೊಂದಿಗೆ ಮಾತನಾಡಿರುವ ವ್ಯಕ್ತಿ, ಪಾಕಿಸ್ತಾನವನ್ನು ಸಹ ನರೇಂದ್ರ ಮೋದಿಯವರೇ ಆಡಳಿತ ಮಾಡಲಿ ಎಂದು ಹೇಳಿದ್ದಾರೆ.
ಭಾರತ – ಪಾಕಿಸ್ತಾನ ವಿಭಜನೆ ಆಗಲೇಬಾರದಿತ್ತು. ವಿಭಜನೆಯಾಗದಿದ್ದರೆ ನಾನು ಹಾಗೂ ನನ್ನ ದೇಶದ ಜನತೆ ಈ ಸಂದರ್ಭದಲ್ಲಿ ನಮ್ಮ ಮಕ್ಕಳಿಗೆ ಊಟವನ್ನಾದರೂ ಕೊಡಬಹುದಾಗಿತ್ತು. ಆದರೆ ಈಗ ನಾವು ಬೀದಿಗೆ ಬಿದ್ದಿದ್ದೇವೆ ಎಂದು ಹೇಳಿದ್ದಾನೆ. ಅಲ್ಲದೆ ಪಾಕಿಸ್ತಾನದಲ್ಲಿ ನಾನು ಹುಟ್ಟಲೇ ಬಾರದಾಗಿತ್ತು ಎಂದು ಆತ ಹೇಳಿಕೊಂಡಿದ್ದಾನೆ.
https://twitter.com/IMinakshiJoshi/status/1628637639061692416?ref_src=twsrc%5Etfw%7Ctwcamp%5Etweetembed%7Ctwterm%5E1628637639061692416%7Ctwgr%5E447606e276ccf7c4a71253cb263435d9d65736c8%7Ctwcon%5Es1_&ref_url=https%3A%2F%2Fwww.opindia.com%2F2023%2F02%2Fpakistani-man-wishes-narendra-modi-was-their-prime-minister%2F