ಬೆಂಗಳೂರು: 5 ವರ್ಷಗಳ ಕಾಲ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ ಯುವಕ ಕೈಕೊಟ್ಟ ಘಟನೆ ಬೆಂಗಳೂರಿನ ಕಗ್ಗಲಿಪುರದಲ್ಲಿ ನಡೆದಿದೆ.
ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ್ದ ಯುವಕ, ಯುವತಿಯನ್ನು ದೈಹಿಕವಾಗಿಯೂ ಬಳಸಿಕೊಂಡಿದ್ದ. ಈಗ ಮದುವೆಯಾಗುವಂತೆ ಹೇಳಿದ್ದಕ್ಕೆ ಯುವಕನ ಕುಟುಂಬದವರು ಯುವತಿ ಹಾಗೂ ಆಕೆ ಮನೆಯವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಕಗ್ಗಲಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್.ಫರ್ವೇಜ್ ಮಗ ಶೋಯಬ್, ಡಾ.ನಿಶಾ ಎಂಬ ಯುವತಿಯನ್ನು 5 ವರ್ಷಗಳಿಂದ ಪ್ರೀತಿಸಿದ್ದ. ಈಗ ಮದುವೆಯಾಗುವಂತೆ ಯುವತಿ ಕುಟುಂಬದವರು ಹೇಳುತ್ತಿದ್ದಂತೆ ಶೋಯಬ್ ಕುಟುಂಬದವರು ಯುವತಿ ಹಾಗೂ ಆಕೆಯ ಮನೆಯವರ ಮೇಲೆ ಮಾರಣಾಂತಿಕವಾಗಿ ಥಳಿಸಿದ್ದಾರೆ. ಹಲ್ಲೆಗೊಳಗಾದವರನ್ನು ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಗ್ಗಲಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.