ಚಲಿಸುತ್ತಿರುವ ಟ್ರಕ್ ಅನ್ನು ಟೆಸ್ಲಾ ಕಾರೊಂದು ರೈಲು ಎಂದು ಭಾವಿಸಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೇಮ್ಸ್ ಅರ್ಬನಿಯಾಕ್ ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು ಮೈಕ್ರೋ-ಬ್ಲಾಗಿಂಗ್ ವೆಬ್ಸೈಟ್ನಲ್ಲಿ ಇದರ ವಿಡಿಯೋ ಹಂಚಿಕೊಂಡಿದ್ದಾರೆ.
ಟ್ರಕ್ಗಳ ಗುಂಪನ್ನು ಟೆಸ್ಲಾ ಕಾರು ರೈಲು ಎಂದು ತಪ್ಪಾಗಿ ಗ್ರಹಿಸಿದೆ ಎಂದು ಅವರು ಹೇಳಿದ್ದಾರೆ. ಟೆಸ್ಲಾ ಕಂಪೆನಿಯ ನ್ಯಾವಿಗೇಷನ್ ಸಿಸ್ಟಮ್ನಲ್ಲಿನ ಈ ದೋಷವಾಗಿದೆ ಎಂದಿರುವ ಅವರು, ವಿಡಿಯೋದಲ್ಲಿ ಅದರ ಹೈಲೈಟ್ ಮಾಡಿದ್ದಾರೆ.
ವಿಡಿಯೋದಲ್ಲಿ, ಟೆಸ್ಲಾ ಕಾರು ರೈಲು ಹಾದುಹೋಗಲು ಲೆವೆಲ್ ಕ್ರಾಸಿಂಗ್ನಲ್ಲಿ ಕಾಯುತ್ತಿರುವುದನ್ನು ಕಾಣಬಹುದು. ಆದರೆ ಕಾರು ಅಲ್ಲಿ ಚಲಿಸುತ್ತಿರುವುದು ಟ್ರಕ್ಗಳು ಎಂದು ಗ್ರಹಿಸುವ ಬದಲು ರೈಲು ಎಂದು ತಪ್ಪಾಗಿ ತಿಳಿದಿರುವ ಕುರಿತು ಬಳಕೆದಾರರು ಬರೆದುಕೊಂಡಿದ್ದಾರೆ.
ನಾನು ವಾರಾಂತ್ಯದಲ್ಲಿ ಪಟ್ಟಣದಿಂದ ಹೊರಗೆ ಹೋಗಿದ್ದೆ. ಟೆಸ್ಲಾ ನನಗೆ ಅತ್ಯಂತ ಆನಂದ ನೀಡಿದೆ. ಆದರೆ ಟ್ರಕ್ ಅನ್ನು ರೈಲು ಎಂದು ಗ್ರಹಿಸಿದ್ದು ಮಾತ್ರ ತಮಾಷೆಯಾಗಿದೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಥರಹೇವಾರಿ ಕಮೆಂಟ್ಗಳು ಬಂದಿವೆ.