ರಿಲಯನ್ಸ್ ಜಿಯೋ ಫೆಬ್ರವರಿ 21 ರ ಇಂದಿನಿಂದ ಟ್ರೂ 5ಜಿ ಸೇವೆಗಳನ್ನು ಕರ್ನಾಟಕದ ರಾಯಚೂರಿನಲ್ಲಿ ಆರಂಭಿಸಿದೆ. ಇದರ ಜತೆಗೆ ಬೊಂಗೈಗಾಂವ್, ಉತ್ತರ ಲಖಿಂಪುರ, ಶಿವಸಾಗರ್, ತಿನ್ಸುಕಿಯಾ (ಅಸ್ಸಾಂ), ಭಾಗಲ್ಪುರ್, ಕತಿಹಾರ್ (ಬಿಹಾರ), ಮರ್ಮಗೋವಾ (ಗೋವಾ) ಸೇರಿದಂತೆ 19 ನಗರಗಳಲ್ಲಿ ಪ್ರಾರಂಭಿಸುವುದಾಗಿ ಘೋಷಣೆ ಮಾಡಿದೆ.
ಡಿಯು (ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು), ಗಾಂಧಿಧಾಮ್ (ಗುಜರಾತ್), ಬೊಕಾರೊ ಸ್ಟೀಲ್ ಸಿಟಿ, ದಿಯೋಘರ್, ಹಜಾರಿಬಾಗ್ (ಜಾರ್ಖಂಡ್), ಸತ್ನಾ (ಮಧ್ಯಪ್ರದೇಶ), ಚಂದ್ರಾಪುರ್, ಇಚಲಕರಂಜಿ (ಮಹಾರಾಷ್ಟ್ರ), ತೌಬಲ್ (ಮಣಿಪುರ), ಫೈಜಾಬಾದ್, ಫಿರೋಜಾಬಾದ್ , ಮುಜಾಫರ್ನಗರ (ಉತ್ತರ ಪ್ರದೇಶ) ಸೇರಿ ಇದೀಗ ಜಿಯೋ ಟ್ರೂ 5ಜಿ ಅನ್ನು ಪಡೆಯುತ್ತಿರುವ ನಗರಗಳ ಒಟ್ಟು ಸಂಖ್ಯೆಯನ್ನು 277ಕ್ಕೆ ಒಯ್ದಿದೆ.
ರಿಲಯನ್ಸ್ ಜಿಯೋ ಬಹುತೇಕ ರಾಯಚೂರಿನಲ್ಲಿ (ಕರ್ನಾಟಕ) 5ಜಿ ಸೇವೆಗಳನ್ನು ಪ್ರಾರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ. ಇಂದಿನಿಂದ ಪ್ರಾರಂಭವಾಗುವ ಸೇವೆಯನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಈ ನಗರಗಳಲ್ಲಿನ ಜಿಯೋ ಬಳಕೆದಾರರನ್ನು ವೆಲ್ಕಮ್ ಕೊಡುಗೆಗೆ ಆಹ್ವಾನಿಸಲಾಗುತ್ತದೆ.