ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಸಂಘರ್ಷ ಬೆನ್ನಲ್ಲೇ ರಾಜ್ಯ ಸರ್ಕಾರ ಇಬ್ಬರು ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿದ್ದರೂ ಅದಕ್ಕೂ ಬಗ್ಗದ ಡಿ.ರೂಪಾ, ರೋಹಿಣಿ ವಿರುದ್ಧ ಮತ್ತೆ ಫೋಟೋ ಸಮರ ಮುಂದುವರೆಸಿದ್ದಾರೆ.
ರೋಹಿಣಿ ಸಿಂಧೂರಿಗೆ ಸೇರಿದ್ದು ಎನ್ನಲಾದ ನಿರ್ಮಾಣ ಹಂತದ ಬೃಹತ್ ಮನೆಯ ಫೋಟೋಗಳನ್ನು ಡಿ.ರೂಪಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ಪ್ರಶ್ನೆಗಳಿಗೆ ಸಿಂಧೂರಿ ಸ್ಪಷ್ಟನೆ ನೀಡಿಲ್ಲ. ಸರ್ಕಾರಕ್ಕೆ ಸಿಂಧೂರಿ ತೆರಿಗೆ ವಂಚನೆ ಮಾಡಿದ್ದಾರೆ. ಜರ್ಮನ್, ಇಟಾಲಿಯನ್ ಪೀಠೋಪಕರಣ ತರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ರೋಹಿಣಿ ವಿರುದ್ಧ ಭ್ರಷ್ಟಾಚಾರ, ತೆರಿಗೆ ವಂಚನೆ ಆರೋಪಗಳಿವೆ. ಆದರೂ ಸಿಂಧೂರಿಯನ್ನು ರಕ್ಷಿಸುವ ಕೆಲಸವಾಗುತ್ತಿದೆ. ನನ್ನ ಯಾರು ತಡೆಯುತ್ತಾರೆ ನೋಡ್ತೀನಿ ಎಂದು ಸರ್ಕಾರಕ್ಕೆ ಸೆಡ್ಡೆ ಹೊಡೆದು ಫೋಟೋ ಬಿಡುಗಡೆ ಮಾಡಿದ್ದಾರೆ.