ಆಘಾತಕಾರಿ ಘಟನೆಯೊಂದರಲ್ಲಿ ಹಾಡಹಗಲೇ 50 ವರ್ಷದ ಮಹಿಳೆ ಮೇಲೆ ಬೈಕಿನಲ್ಲಿ ಬಂದ ನಾಲ್ವರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಶಾಕಿಂಗ್ ಸಂಗತಿ ಎಂದರೆ ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಇಬ್ಬರು ಪೊಲೀಸರು ಮಹಿಳೆ ರಕ್ಷಿಸುವುದನ್ನು ಬಿಟ್ಟು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಇಂತಹದೊಂದು ಘಟನೆ ಸೋಮವಾರ ಪಂಜಾಬಿನ ಫಿರೋಜ್ ಫುರ್ ಕಂಟೋನ್ಮೆಂಟ್ ನ ಬಾಜ್ ಚೌಕ್ನಲ್ಲಿ ನಡೆದಿದ್ದು, ಮಹಿಳೆ ಕೊಲೆ ಪ್ರಕರಣ ಒಂದರ ವಿಚಾರಣೆಗಾಗಿ ನ್ಯಾಯಾಲಯಕ್ಕೆ ತೆರಳಿ ವಾಪಸ್ ಮನೆಗೆ ಬರುವಾಗ ಹಲ್ಲೆ ನಡೆಸಲಾಗಿದೆ.
ಬೈಕಿನಲ್ಲಿ ಬಂದ ನಾಲ್ವರು ಕತ್ತಿ, ತಲವಾರುಗಳಿಂದ ಮಹಿಳೆಯ ಮೇಲೆ ಮನಬಂದಂತೆ ಬೀಸಿದ್ದು, ಇದರ ಪರಿಣಾಮವಾಗಿ ಆಕೆ ತೀವ್ರವಾಗಿ ಗಾಯಗೊಂಡಿದ್ದಾಳೆ. ಮೊದಲಿಗೆ ಆಕೆಯನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಬಳಿಕ ಫರೀದ್ ಕೋಟ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಈ ಹಿಂದೆ ನಡೆದಿದ್ದ ಕೊಲೆ ಪ್ರಕರಣದಲ್ಲಿ ಮಹಿಳೆಯ ಪಾತ್ರ ಇರಬಹುದು ಎಂಬ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ ಎಂಬ ಶಂಕೆಯನ್ನು ಪೊಲೀಸರು ಹೊಂದಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಪಡೆದುಕೊಂಡು ಪರಿಶೀಲನೆ ನಡೆಸಿದ್ದಾರೆ.
https://twitter.com/FaceItNoww/status/1627824461071392768?ref_src=twsrc%5Etfw%7Ctwcamp%5Etweetembed%7Ctwterm%5E1627824461071392768%7Ctwgr%5Ede6e537b1058abc33f703890ac3886d0d41d3e70%7Ctwcon%5Es1_&ref_url=https%3A%2F%2Fwww.freepressjournal.in%2Findia%2Fpunjab-shocker-4-men-attack-woman-with-swords-in-ferozepur-police-on-spot-flees-away-chilling-video-surfaces