ನವದೆಹಲಿಯಲ್ಲಿ ನಡೆದ ಬಾರ್ಡರ್ – ಗವಾಸ್ಕರ್ ಟ್ರೋಪಿಯಲ್ಲಿ ಆಸ್ಟ್ರೇಲಿಯಾವನ್ನು ಬಗ್ಗು ಬಡಿದಿರುವ ಟೀಮ್ ಇಂಡಿಯಾ ಸತತ 4ನೇ ಬಾರಿಗೆ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ.
ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ಆಟಗಾರರು ನವದೆಹಲಿಯಲ್ಲಿರುವ ಪ್ರಧಾನಮಂತ್ರಿ ಮ್ಯೂಸಿಯಂಗೆ ಭೇಟಿ ನೀಡಿ ಅಪರೂಪದ ವಸ್ತುಗಳು ಹಾಗೂ ಫೋಟೋಗಳನ್ನು ವೀಕ್ಷಿಸಿ ಅವುಗಳ ಮಾಹಿತಿ ಪಡೆದಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಸೇರಿದಂತೆ ಎಲ್ಲ ಆಟಗಾರರು ಸಹ ಈ ಮ್ಯೂಸಿಯಂ ಗೆ ಭೇಟಿ ನೀಡಿದ್ದು, ಸ್ವಾತಂತ್ರ್ಯ ನಂತರ ಭಾರತ ನಡೆದು ಬಂದ ಹಾದಿ ಹಾಗೂ ಈವರೆಗಿನ ಎಲ್ಲ ಪ್ರಧಾನಿಗಳ ಕುರಿತ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಕಳೆದ ವರ್ಷ ನರೇಂದ್ರ ಮೋದಿಯವರು ಈ ಮ್ಯೂಸಿಯಂ ಉದ್ಘಾಟಿಸಿದ್ದರು.
https://twitter.com/BCCI/status/1627331996212142080?ref_src=twsrc%5Etfw%7Ctwcamp%5Etweetembed%7Ctwterm%5E1627331996212142080%7Ctwgr%5E025cdc03af722c5089127d16f011aceedee270b9%7Ctwcon%5Es1_&ref_url=https%3A%2F%2Fwww.timesnownews.com%2Fsports%2Fcricket%2Fwatch-team-india-players-visit-pradhanmantri-sangrahalaya-after-win-against-australia-in-2nd-test-article-98071462