HomeKarnatakaBIG NEWS: ಚುನಾವಣೆ ಬಳಿಕ 100% ಮತ್ತೆ ಆಪರೇಷನ್ ಕಮಲ; ಮುಂದೆ ನೀವೇ ನೋಡಿ ಎಂದ...

BIG NEWS: ಚುನಾವಣೆ ಬಳಿಕ 100% ಮತ್ತೆ ಆಪರೇಷನ್ ಕಮಲ; ಮುಂದೆ ನೀವೇ ನೋಡಿ ಎಂದ ರಮೇಶ್ ಜಾರಕಿಹೊಳಿ

ಬೆಳಗಾವಿ: ಚುನಾವಣೆ ಬಳಿಕ ಮತ್ತೆ ಆಪರೇಷನ್ ಕಮಲ ನಡೆಯಲಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ಬಳಿಕ ಯಾರು ಬಿಜೆಪಿಗೆ ಬರ್ತಾರೆ, ಫಲಿತಾಂಶದ ದಿನ ಯಾರು ನನ್ನ ಕಡೆ ಇರ್ತಾರೆ ಎಂಬುದನ್ನು ನಂತರ ಹೇಳುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಂಡ್ರೆಡ್ ಪರ್ಸೆಂಟ್ ಮತ್ತೊಮ್ಮೆ ಆಪರೇಷನ್ ಕಮಲ ಆಗುತ್ತೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಯಾವುದೇ ಕಾರಣಕ್ಕೂ ನಾನು ಬಿಡುವುದಿಲ್ಲ. ನನ್ನ ಬಳಿ ಏನೂ ಇಲ್ಲದಿದ್ದಾಗ 17 ಜನರನ್ನು ನಾನು ಬಿಜೆಪಿಗೆ ತಂದು ಕೂರಿಸಿದ್ದೇನೆ. ಆದರೆ ಈಗ ಹೈಕಮಾಂಡ್ ಅವರ ದೊಡ್ಡ ಪ್ರಮಾಣದ ಆಶಿರ್ವಾದ ನನ್ನ ಮೇಲಿದೆ. ಮುಂದೇನಾಗುತ್ತೆ ಎಂದು ನೀವೇ ನೋಡಿ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular