ತ್ಯಾಜ್ಯ ವಿಲೇವಾರಿ ಸಮಸ್ಯೆ, ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ದೇಶದ ಬಹು ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಗಲಿರುಳು ಶ್ರಮಿಸುವವರಿದ್ದಾರೆ, ಇದಾಗಲೇ ಈ ತ್ಯಾಜ್ಯದ ಪ್ರಯೋಜನ ಪಡೆದು ಹಲವಾರು ಸಾಮಗ್ರಿಗಳನ್ನು ತಯಾರಿಸುವ ಪ್ರಯತ್ನಗಳು ನಡೆಯುತ್ತಿವೆ.
ಇವುಗಳ ನಡುವೆಯೇ ಪುಣೆಯ ಈ ಪುಟ್ಟ ಕೆಮಿಕಲ್ ಲ್ಯಾಬ್ ಭರವಸೆಯ ಕಿರಣವನ್ನು ಹುಟ್ಟು ಹಾಕಿದೆ. ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಸನ್ಗ್ಲಾಸ್ ತಯಾರು ಮಾಡಲಾಗುತ್ತಿದೆ. ಆಶಯ ಎಂಬ ಕಂಪೆನಿ ಈ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ತಿಂದು ಬಿಟ್ಟ ಚಿಪ್ಸ್ ಪ್ಯಾಕೇಟ್ಗಳಿಂದ ಸುಂದರವಾದ ಸನ್ಗ್ಲಾಸ್ ತಯಾರು ಮಾಡಲಾಗುತ್ತಿದೆ.
ಕಂಪೆನಿಯ ಸಂಸ್ಥಾಪಕರಲ್ಲಿ ಒಬ್ಬರಾದ ಅನೀಶ್ ಮಲ್ಪಾನಿ ಅವರು ಈ ಬಗ್ಗೆ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಸನ್ಗ್ಲಾಸ್ ತಯಾರು ಮಾಡುತ್ತಿರುವ ಬಗ್ಗೆ ಅವರು ವಿವರಿಸಿದ್ದಾರೆ.
ಈ ವಿಡಿಯೋದಲ್ಲಿ ಪ್ಲಾಸ್ಟಿಕ್ನಿಂದ ಸನ್‌ಗ್ಲಾಸ್‌ಗಳನ್ನು ಹಂತ ಹಂತವಾಗಿ ಹೇಗೆ ತಯಾರಿಸಲಾಗಿದೆ ಎಂಬುದನ್ನು ವಿವರಿಸಲಾಗಿದೆ.
https://twitter.com/AnishMalpani/status/1626123868384665602?ref_src=twsrc%5Etfw%7Ctwcamp%5Etweetembed%7Ctwterm%5E1626123868384665602%7Ctwgr%5E5c6fbb352c0b604819842def235462a4a118f296%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fheres-how-this-company-is-making-cool-sunglasses-out-of-chips-packets-read-full-story-2336365-2023-02-18