“ಡ್ಯಾಮ್ ಡೇನಿಯಲ್” ಎಂಬ ಯುವಕರು ಇಂಟರ್ನೆಟ್ನಲ್ಲಿ ಬಿರುಗಾಳಿ ಎಬ್ಬಿಸಿರುವುದು ಹಳೆಯ ಸುದ್ದಿ. ಟ್ವಿಟರ್ ಬಳಕೆದಾರರಾಗಿದ್ದರೆ ನೀವು ಇವರ ಹಾಸ್ಯಗಳ ವಿಡಿಯೋಗಳನ್ನು ನೋಡಿ ಬಿದ್ದೂ ಬಿದ್ದೂ ನಕ್ಕಿರಲು ಸಾಕು. ಈಗ ಈ ಯುವಕರು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕಾರಣ, ಇವರು ಇಂಟರ್ನೆಟ್ ಖ್ಯಾತಿ ಗಳಿಸಿ ಏಳು ವರ್ಷಗಳಾಗಿವೆ.
ಇಷ್ಟು ಬೇಗ ಏಳು ವರ್ಷ ಎಂದು ಶೀರ್ಷಿಕೆ ಕೊಟ್ಟಿರುವ ಇವರು ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಫೆಬ್ರವರಿ 16 ರಂದು ನಮ್ಮ ಜಾಲತಾಣದ ಪಯಣಕ್ಕೆ ಏಳು ವರ್ಷ ತುಂಬಿತು ಎಂದಿದ್ದಾರೆ.
ಹಳೆಯ ಕ್ಲಿಪ್ ಅನ್ನು ಮರುಟ್ವೀಟ್ ಮಾಡಿರುವ ಅವರು “7 ವರ್ಷಗಳು … ಡ್ಯಾಮ್” ಎಂದು ಬರೆದಿದ್ದಾರೆ. ಈ ಯುವಕರ ವಿಡಿಯೋವನ್ನು ಚಾಚೂ ತಪ್ಪದೇ ಫಾಲೋ ಮಾಡುತ್ತಿರುವ ಅನುಯಾಯಿಗಳು ಏಳು ವರ್ಷ ಆಯಿತು ಎಂದು ಕೇಳಿ ಅಚ್ಚರಿ ಪಟ್ಟಿದ್ದಾರೆ. ಇಷ್ಟು ಬೇಗ ಎಂದು ಆಶ್ಚರ್ಯದಿಂದ ಪ್ರಶ್ನಿಸಿದ್ದಾರೆ. ಇದಕ್ಕೆ ಯುವಕರು ನಿಮ್ಮೆಲ್ಲರ ಪ್ರೀತಿ, ವಿಶ್ವಾಸದಿಂದ ನಾವಿಂದು ಎಂಟನೇ ವರ್ಷಕ್ಕೆ ಕಾಲಿಟ್ಟಿದ್ದೇವೆ ಎಂದಿದ್ದಾರೆ. ನೆಟ್ಟಿಗರು ಶುಭ ಕೋರುತ್ತಿದ್ದಾರೆ.
7 years… damn https://t.co/gGw26kCShM
— J O S H (@Josholzz) February 16, 2023
https://twitter.com/morganforte/status/1626081696285171716?ref_src=twsrc%5Etfw%7Ctwcamp%5Etweetembed%7Ctwterm%5E1626081696285171716%7Ctwgr%5Eeb2aa54d355371d349bdf841c45234fb89a02f21%7Ctwcon%5Es1_&ref_url=https%3A%2F%2Fwww.news18.com%2Fbuzz%2Fdamn-daniel-creator-josh-celebrates-7-years-of-viral-video-that-changed-the-internet-7102699.html
7 years… damn https://t.co/gGw26kCShM
— J O S H (@Josholzz) February 16, 2023