Vira Video: 90 ಲಕ್ಷ ರೂ. ಮೌಲ್ಯದ ಕಾರ್ ಖರೀದಿಸಿದ ʼಎಂಬಿಎ ಚಾಯ್​ವಾಲಾʼ

ಸಾಮಾಜಿಕ ಜಾಲತಾಣಗಳಲ್ಲಿ ‘ಎಂಬಿಎ ಚಾಯ್‌ವಾಲಾ’ ಎಂದು ಜನಪ್ರಿಯರಾಗಿರುವ ಪ್ರಫುಲ್ ಬಿಲ್ಲೋರ್ ಅವರು ಮರ್ಸಿಡಿಸ್ ಕಾರನ್ನು ಮನೆಗೆ ತಂದಿದ್ದಕ್ಕಾಗಿ ವೈರಲ್ ಆಗಿದ್ದಾರೆ.

ಅವರು 2017 ರಿಂದ ಐಐಎಂ-ಅಹಮದಾಬಾದ್‌ನ ಹೊರಗೆ ಟೀ ಸ್ಟಾಲ್ ಅನ್ನು ನಡೆಸುತ್ತಿದ್ದಾರೆ. ಇವರು ಎಂಬಿಎ ಡ್ರಾಪ್‌ಔಟ್ ಎಂದು ವರದಿಯಾಗಿದೆ.

ತಮ್ಮ ಜಾಲತಾಣದಲ್ಲಿ 1.5 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಈ ಯುವಕ ಇನ್​ಸ್ಟಾಗ್ರಾಮ್​ ಪ್ರಭಾವಶಾಲಿಯೂ ಆಗಿದ್ದಾರೆ.

ಅವರೀಗ 90 ಲಕ್ಷ ರೂಪಾಯಿಯ ಕಾರನ್ನು ಖರೀದಿ ಮಾಡಿದ್ದಾರೆ. ಅದರ ಕುರಿತು ಇನ್​ಸ್ಟಾಗ್ರಾಮ್​ ರೀಲ್‌ ಮಾಡಿದ್ದಾರೆ.

ಅವರು ಶೋರೂಮ್‌ನಲ್ಲಿ ಮರ್ಸಿಡಿಸ್ SUV ಅನ್ನು ಅನಾವರಣಗೊಳಿಸುವುದನ್ನು ನಾವು ನೋಡಬಹುದು. ರೀಲ್ ವೀಕ್ಷಿಸಿದ ನೆಟ್ಟಿಗರು ಶ್ಲಾಘನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ನೀವೇ ನಮಗೆ ಪ್ರೇರಣೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read