alex Certify ಅರುಣ್ ಜೇಟ್ಲಿ ಸ್ಟೇಡಿಯಂ ತುಂಬಾ ಗುಟ್ಕಾ ಪ್ರಚಾರ: ನೆಟ್ಟಿಗರ ಕೆಂಗಣ್ಣು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರುಣ್ ಜೇಟ್ಲಿ ಸ್ಟೇಡಿಯಂ ತುಂಬಾ ಗುಟ್ಕಾ ಪ್ರಚಾರ: ನೆಟ್ಟಿಗರ ಕೆಂಗಣ್ಣು

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ 2023 ರ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಕ್ರೀಡಾಂಗಣ, ಟ್ರೋಲ್​ಗೆ ಒಳಗಾಗಿದೆ. ಕ್ರಿಕೆಟ್ ಪ್ರೇಮಿಗಳು ಕ್ರಿಕೆಟ್​ ನೋಡಲು ಕಾತರದಿಂದ ಕಾಯುತ್ತಿದ್ದರೆ, ಟ್ರೋಲಿಗರಿಗೆ ಇದು ಆಹಾರವಾಗಿದೆ.

ಇದಕ್ಕೆ ಕಾರಣ, ಕ್ರೀಡಾಂಗಣದ ತುಂಬಾ ಗುಟ್ಕಾದ ಜಾಹೀರಾತು ತುಂಬಿ ಹೋಗಿದೆ. ಪಾನ್-ಗುಟ್ಕಾ ಬ್ರ್ಯಾಂಡ್ ‘ಪಾನ್ ಬಹಾರ್’ ಅನ್ನು ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ. ಇದರಿಂದ ಜನರು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದ್ದು, ಜನರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

ಗುಟ್ಕಾ ಜೀವಕ್ಕೆ ಹಾನಿಕಾರಕ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ತಂಬಾಕು ಉತ್ಪನ್ನಗಳಿಗೆ ಈ ರೀತಿಯ ಪ್ರಾಮುಖ್ಯತೆ ನೀಡಿರುವುದು ಅತ್ಯಂತ ಹೇಯಕರ. ಈ ಜಾಹೀರಾತನ್ನು ನೋಡಿ ಯುವಜನರು ಪ್ರಚೋದನೆಗೆ ಒಳಗಾಗುತ್ತಿದ್ದಾರೆ. ಅರುಣ್ ಜೇಟ್ಲಿ ಕ್ರೀಡಾಂಗಣವನ್ನು ಗುಟ್ಕಾ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...