alex Certify BIG NEWS: ಸಚಿವ ಅಶ್ವತ್ಥನಾರಾಯಣ ಹೇಳಿಕೆಗೆ ಸಿ.ಟಿ. ರವಿ ಆಕ್ಷೇಪ; ಇಂತಹ ಹೇಳಿಕೆಯನ್ನು ಬಿಜೆಪಿ ಒಪ್ಪಲ್ಲ ಎಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಚಿವ ಅಶ್ವತ್ಥನಾರಾಯಣ ಹೇಳಿಕೆಗೆ ಸಿ.ಟಿ. ರವಿ ಆಕ್ಷೇಪ; ಇಂತಹ ಹೇಳಿಕೆಯನ್ನು ಬಿಜೆಪಿ ಒಪ್ಪಲ್ಲ ಎಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ನವದೆಹಲಿ: ಟಿಪ್ಪು ಹೊಡೆದಂತೆ ಸಿದ್ದರಾಮಯ್ಯ ಅವರನ್ನೂ ಹೊಡೆದು ಹಾಕಿ ಎಂಬ ಸಚಿವ ಅಶ್ವತ್ಥನಾರಾಯಣ ಹೇಳಿಕೆಗೆ ಸ್ವತ: ಬಿಜೆಪಿ ನಾಯಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಶ್ವತ್ಥನಾರಾಯಣ ಅವರ ಹೇಳಿಕೆಯನ್ನು ನಾವು ಒಪ್ಪಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಸಿ.ಟಿ.ರವಿ, ಬಿಜೆಪಿಯೂ ಸಚಿವರ ಈ ಹೇಳಿಕೆಯನ್ನು ಒಪ್ಪಲ್ಲ. ಅವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ, ಆದರೆ ಇಂತಹ ಹೇಳಿಕೆಯನ್ನು ಒಪ್ಪಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ನಮ್ಮವರೇ, ಅವರು ರಾಜಕೀಯ ವಿರೋಧಿಯಷ್ಟೇ. ನಮ್ಮ ಶತ್ರುವಲ್ಲ. ಈ ದೇಶದಲ್ಲಿರುವ ಎಲ್ಲರೂ ನಮ್ಮವರೇ… ಶತ್ರುಗಳಲ್ಲ, ವಿಚಾರಗಳಲ್ಲಿ ಭಿನ್ನತೆ ಇರಬಹುದು ಅಷ್ಟೇ. ಆದರೆ ಸಿದ್ದರಾಮಯ್ಯ ನಮ್ಮ ಶತ್ರು ಅಲ್ಲ. ಸಿದ್ದರಾಮಯ್ಯ ಇನ್ನಷ್ಟು ಆಯುಷ್ಯವಂತರಾಗಿ, ಆರೋಗ್ಯವಂತರಾಗಿ ಬಾಳಲಿ ಎಂದೇ ನಾವು ಪ್ರಾರ್ಥಿಸುತ್ತೇವೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...