ಬೆಲೆ, ವಾಯು ಮಾಲಿನ್ಯ ಸೇರಿದಂತೆ ವಿವಿಧ ಕಾರಣಗಳಿಗಾಗಿ ವಾಹನ ಖರೀದಿಸುವವರು ಡೀಸೆಲ್ – ಪೆಟ್ರೋಲ್ ಹೊರತುಪಡಿಸಿ ವಿದ್ಯುತ್ ಚಾಲಿತ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಬಹುತೇಕ ಎಲ್ಲ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮಾಡುತ್ತಿವೆ.
ಇದೀಗ ಐಷಾರಾಮಿ ವಾಹನ ತಯಾರಿಕಾ ಕಂಪನಿ ವೋಲ್ವೋ ಕಾರ್ಸ್ 2025 ರಿಂದ ಭಾರತದಲ್ಲಿ ಸಂಪೂರ್ಣ ವಿದ್ಯುತ್ ಚಾಲಿತ ವಾಹನಗಳನ್ನು ಮಾರಾಟ ಮಾಡುವುದಾಗಿ ತಿಳಿಸಿದೆ.
ಮಾರುಕಟ್ಟೆಯಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಅದಕ್ಕೆ ಅನುಗುಣವಾಗಿ ತಾನು ಕಾರ್ಯನಿರ್ವಹಿಸುವುದಾಗಿ ಕಂಪನಿ ತಿಳಿಸಿದೆ.
ಇದರ ಮಧ್ಯೆ ವೋಲ್ವೋ, ಈ ವರ್ಷಾಂತ್ಯಕ್ಕೆ ಸಿ40 ಎಂಬ ಹೊಸ ಮಾಡೆಲ್ ಕಾರ್ ಬಿಡುಗಡೆ ಮಾಡಲಾಗುತ್ತಿದ್ದು, ಇದರ ಬೆಲೆ 56.90 (ಎಕ್ಸ್ ಶೋ ರೂಮ್) ಬೆಲೆ ಇರಲಿದೆ ಎಂದು ತಿಳಿಸಿದೆ.