ನಾಳೆ ರಾಜ್ಯ ಬಜೆಟ್ ಮಂಡನೆ: ಸರ್ಕಾರಿ ನೌಕರರಿಗೆ ‘ಬಂಪರ್’ ನಿರೀಕ್ಷೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ತಮ್ಮ ಎರಡನೇ ಬಜೆಟ್ ಮಂಡನೆ ಮಾಡುತ್ತಿದ್ದು, ಇದಕ್ಕಾಗಿ ಬೆಳಿಗ್ಗೆ 10-15 ರ ಮುಹೂರ್ತ ನಿಗದಿಯಾಗಿದೆ. ಪ್ರಸಕ್ತ ವಿಧಾನಸಭೆಯ ಕೊನೆಯ ಬಜೆಟ್ ಇದಾಗಿದ್ದು, ಚುನಾವಣಾ ವರ್ಷವಾಗಿರುವ ಕಾರಣ ಸಹಜವಾಗಿಯೇ ಜನಪ್ರಿಯ ಘೋಷಣೆಗಳು ಬರುವ ನಿರೀಕ್ಷೆ ಇದೆ.

ರೈತರು, ಬಡವರು, ಮಹಿಳೆಯರು ಹಾಗೂ ಸರ್ಕಾರಿ ನೌಕರರನ್ನು ಕೇಂದ್ರವಾಗಿಟ್ಟುಕೊಂಡು ನಾಳಿನ ಬಜೆಟ್ ಮಂಡನೆ ಆಗಲಿದೆ ಎಂದು ಹೇಳಲಾಗುತ್ತಿದ್ದು, ಏಳನೇ ವೇತನ ಆಯೋಗ ರಚನೆ ಮಾಡಿರುವ ಕಾರಣ ಬಜೆಟ್ ನಲ್ಲಿ ಇದರ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.

ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದಿಲ್ಲವಾದರೂ ಸಹ ಅದನ್ನು ಹೊರತುಪಡಿಸಿ ಸರ್ಕಾರಿ ನೌಕರರ ಮತಗಳನ್ನು ಸೆಳೆಯುವ ಸಲುವಾಗಿ ಹಲವು ಭರವಸೆಗಳನ್ನು ನೀಡಬಹುದು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read