alex Certify GOOD NEWS: ಆಧಾರ್‌ ಕುರಿತ ಮಾಹಿತಿ ಪಡೆಯಲು ಹೊಸ ಸೇವೆ; 24×7 ಟೋಲ್ ಫ್ರೀ ಸಂಖ್ಯೆ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಆಧಾರ್‌ ಕುರಿತ ಮಾಹಿತಿ ಪಡೆಯಲು ಹೊಸ ಸೇವೆ; 24×7 ಟೋಲ್ ಫ್ರೀ ಸಂಖ್ಯೆ ಆರಂಭ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ), ಆಧಾರ್‌ನ ಸರ್ಕಾರಿ ಅಧಿಕೃತ ನಿಯಂತ್ರಣ ಸಂಸ್ಥೆ. ಆಧಾರ್‌ ಕಾರ್ಡ್‌ನ ದಾಖಲಾತಿ ಸ್ಥಿತಿ ಮತ್ತು ಇತರ ವಿವರಗಳಿಗೆ ಸಂಬಂಧಿಸಿದ ನವೀಕರಣಗಳನ್ನು ಪರಿಶೀಲಿಸಲು ಹೊಸ ಟೋಲ್ ಫ್ರೀ ಸಂಖ್ಯೆಯನ್ನು ಯುಐಡಿಎಐ ಬಿಡುಗಡೆ ಮಾಡಿದೆ. ಸಂವಾದಾತ್ಮಕ ಧ್ವನಿ ಪ್ರತಿಕ್ರಿಯೆ (IVR) ತಂತ್ರಜ್ಞಾನದ ಹೊಸ ಸೇವೆಗಳು ವಾರದ ಏಳೂ ದಿನಗಳು, 24 ಗಂಟೆಗಳ ಕಾಲ ಲಭ್ಯವಿರುತ್ತವೆ. ಅಲ್ಲಿ ನೀವು ನಿಮ್ಮ PVC ಸ್ಥಿತಿಯನ್ನು ಪರಿಶೀಲಿಸಬಹುದು ಮತ್ತು SMS ಮೂಲಕ ಮಾಹಿತಿಯನ್ನು ಪಡೆಯಬಹುದು.

ಆಧಾರ್ ಕಾರ್ಡ್ ನೋಂದಣಿ ಸ್ಟೇಟಸ್‌ಗೆ ಸಂಬಂಧಿಸಿದ ನವೀಕರಣಗಳನ್ನು ಪಡೆಯಲು ಗ್ರಾಹಕರು 1947 ಅನ್ನು ಡಯಲ್ ಮಾಡಬಹುದು ಅಥವಾ SMS ಕಳುಹಿಸಬಹುದು. #ResidentFirst UIDAI ಮೂಲಕ #IVRS ನಲ್ಲಿ ನಿರ್ಮಿಸಲಾದ ಹೊಸ ಸೇವೆಗಳನ್ನು ಪಡೆದುಕೊಳ್ಳಬಹುದು. ಆಧಾರ್ ನೋಂದಣಿ ಅಥವಾ ನವೀಕರಣದ ಸ್ಟೇಟಸ್‌, PVC ಕಾರ್ಡ್ ಸ್ಟೇಟಸ್‌ ಇದರಲ್ಲಿ ಲಭ್ಯವಾಗಲಿದೆ. ಈ ಬಗ್ಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಸೂಚನೆಗಳನ್ನು ನೀಡಿದೆ.

ಇತ್ತೀಚೆಗೆ ಸರ್ಕಾರ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮತ್ತು ಯಂತ್ರ ಕಲಿಕೆ (AI-ML) ಆಧಾರಿತ ಚಾಟ್‌ಬಾಟ್, ‘ಆಧಾರ್ ಮಿತ್ರ’ವನ್ನು ಪ್ರಾರಂಭಿಸಿತ್ತು. ಇದರಲ್ಲಿ ಜನರು ತಮ್ಮ ಕುಂದುಕೊರತೆಗಳನ್ನು ನೋಂದಾಯಿಸಿಕೊಳ್ಳಬಹುದು. ಆಧಾರ್ ಮಿತ್ರವನ್ನು ಬಳಸಿಕೊಂಡು ಅವುಗಳನ್ನು ಟ್ರ್ಯಾಕ್ ಮಾಡಬಹುದು. ನೀವು ಆಧಾರ್ ದಾಖಲಾತಿ/ಅಪ್‌ಡೇಟ್ ಸ್ಟೇಟಸ್‌, ಆಧಾರ್ ಪಿವಿಸಿ ಕಾರ್ಡ್ ಸ್ಟೇಟಸ್‌ ಟ್ರ್ಯಾಕಿಂಗ್, ದಾಖಲಾತಿ ಕೇಂದ್ರದ ಸ್ಥಳದ ಕುರಿತ ಮಾಹಿತಿಯನ್ನು ಆಧಾರ್ ಮಿತ್ರ ಮೂಲಕ ಪರಿಶೀಲಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...