ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲೇ ಸಾಗುತ್ತಿದ್ದ ಬಂಗಾರದ ಬೆಲೆ ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ನಿನ್ನೆ 52,500 ರೂಪಾಯಿ ಇತ್ತು. ಇಂದು 52,400 ರೂಪಾಯಿಗೆ ಇಳಿಕೆಯಾಗಿದೆ. 24-ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 57,230 ರೂಪಾಯಿಗೆ ಬಂದು ತಲುಪಿದೆ.
ಸ್ಥಳೀಯ ಬೆಲೆಗಳು ಇದಕ್ಕಿಂತ ಸ್ವಲ್ಪ ಭಿನ್ನವಾಗಿರಬಹುದು. TDS, GST ಮತ್ತು ಇತರ ತೆರಿಗೆಗಳು ಸೇರಿದ ಬಳಿಕ ಮತ್ತೆ ಚಿನ್ನದ ದರದಲ್ಲಿ ವ್ಯತ್ಯಾಸವಾಗುತ್ತದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ಬೆಂಗಳೂರಲ್ಲಿ 52,450 ರೂಪಾಯಿ ಇದ್ರೆ, ಚೆನ್ನೈನಲ್ಲಿ 53,300 ರೂಪಾಯಿ ಆಗಿದೆ.
ಮುಂಬೈನಲ್ಲಿ 52,400, ದೆಹಲಿಯಲ್ಲಿ 52,550, ಕೋಲ್ಕತ್ತಾ ಮತ್ತು ಹೈದ್ರಾಬಾದ್‌ನಲ್ಲಿ 52,400, ಸೂರತ್‌ನಲ್ಲಿ 52,450, ಪುಣೆಯಲ್ಲಿ 52,400, ಲಖ್ನೋನಲ್ಲಿ 52,550 ರೂಪಾಯಿ ಆಗಿದೆ. ಸದ್ಯ ಭಾರತದಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ಅಂದಾಜು 70,400 ರೂಪಾಯಿ ಇದೆ. ಮದುವೆ ಸೀಸನ್‌ನಲ್ಲಿ ಬಂಗಾರದ ದರ ಸ್ವಲ್ಪ ಇಳಿಕೆಯಾಗಿರೋದ್ರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.