HomeKarnatakaBIG NEWS: ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ; ಏರೋ ಇಂಡಿಯಾ ಏರ್ ಶೋ ಉದ್ಘಾಟನೆಗೆ ಕ್ಷಣಗಣನೆ

BIG NEWS: ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ; ಏರೋ ಇಂಡಿಯಾ ಏರ್ ಶೋ ಉದ್ಘಾಟನೆಗೆ ಕ್ಷಣಗಣನೆ

ಬೆಂಗಳೂರು: ಇಂದಿನಿಂದ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ ಆರಂಭವಾಗಲಿದೆ. ಏರೋ ಇಂಡಿಯಾ-2023ರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ರಾಜಧಾನಿಗೆ ಆಗಮಿಸಿದ್ದಾರೆ.

ಯಲಹಂಕವಾಯುನೆಲೆಯಲ್ಲಿ ಬೆಂಗಳೂರು ಏರೋ ಇಂಡಿಯಾ-20203 14ನೇ ಏರ್ ಶೋಗೆ ಪ್ರಧಾನಿ ಮೋದಿ ಕೆಲ ಹೊತ್ತಲ್ಲಿ ಚಾಲನೆ ನೀಡಲಿದ್ದಾರೆ. ಇಂದಿನಿಂದ ಫೆ.17ರವರೆಗೆ ಏರ್ ಶೋ ನಡೆಯಲಿದೆ.

ಏರೋ ಇಂಡಿಯಾ ಶೋನಲ್ಲಿ ಬರೋಬ್ಬರಿ 98 ದೇಶಗಳು ಪಾಲ್ಗೊಳ್ಳಲಿವೆ. 251 ಒಪ್ಪಂದಗಳು ಆಗುವ ಸಾಧ್ಯತೆ ಇದೆ. ಮೈನವಿರೇಳಿಸುವಂತಹ ಲೋಹದ ಹಕ್ಕಿಗಳ ಹಾರಾಟಕ್ಕೆ ಸಿಲಿಕಾನ್ ಸಿಟಿ ಸಾಕ್ಷಿಯಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular