ಭಾರತಕ್ಕೆ ಇಸ್ಲಾಂ ಹೊರಗಿನಿಂದ ಬಂದಿಲ್ಲ ಅದು ಇಲ್ಲಿಯೇ ಹುಟ್ಟಿಕೊಂಡಿದೆ: ಜಮಿಯತ್ ಉಲೇಮಾ – ಎ – ಹಿಂದ್ ಮುಖ್ಯಸ್ಥರ ಹೇಳಿಕೆ

ಅತ್ಯಂತ ಹಳೆಯ ಧರ್ಮವಾಗಿರುವ ಇಸ್ಲಾಂ ಭಾರತಕ್ಕೆ ಹೊರಗಿನಿಂದ ಬಂದಿಲ್ಲ, ಅದು ಇಲ್ಲಿಯೇ ಹುಟ್ಟಿಕೊಂಡಿದೆ ಎಂದು ಜಮಿಯತ್ ಉಲೇಮಾ ಎ ಹಿಂದ್ ಮುಖ್ಯಸ್ಥ ಮಹಮೂದ್ ಮದನಿ ಹೇಳಿದ್ದಾರೆ.

ನವದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಆರಂಭವಾದ ಜಮಿಯತ್ ನ 34ನೇ ಅಧಿವೇಶನ ಸಂದರ್ಭದಲ್ಲಿ ಮಾತನಾಡಿದ ಅವರು, ಇಸ್ಲಾಂ ಹೊರಗಿನಿಂದ ಬಂದ ಧರ್ಮ ಎಂದು ಹೇಳುವುದು ಅಥವಾ ಯೋಚಿಸುವುದು ತಪ್ಪು ಎಂದು ನುಡಿದರು.

ಖುದಾ ಅಬು ಅಲ್ ಬಷರನ ಮೊದಲ ಪೈಗಂಬರರು ಇಲ್ಲಿಗೆ ಮೊದಲಿಗೆ ಬಂದರು. ಹೀಗಾಗಿ ಇಸ್ಲಾಂನ ಜನ್ಮಸ್ಥಳ ಭಾರತವಾಗಿದೆ ಎಂದು ಅವರು ತಿಳಿಸಿದರು. ಈ ಅಧಿವೇಶನದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಪ್ರಚೋದಿಸುವವರನ್ನು ಶಿಕ್ಷಿಸಲು ಪ್ರತ್ಯೇಕ ಕಾನೂನು ಜಾರಿಗೊಳಿಸಬೇಕು ಎಂಬುದು ಸೇರಿದಂತೆ ಹಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read