ಮಾಜಿ ಸಿಎಂ ಸಿದ್ದರಾಮಯ್ಯನವರ ಚುನಾವಣಾ ವೆಚ್ಚಕ್ಕಾಗಿ 5 ಸಾವಿರ ರೂ. ನೀಡಲು ಮುಂದಾದ ಬಾಲಕಿ…!

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ್ದು, ಇದರ ಮಧ್ಯೆಯೂ ಅವರ ಕೆಲ ಅಭಿಮಾನಿಗಳು ತಮ್ಮ ತಮ್ಮ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಹ್ವಾನ ನೀಡುತ್ತಲೇ ಇದ್ದಾರೆ.

ಇದರ ಜೊತೆಗೆ ತಾವು ತಮ್ಮ ಹೊಲಗಳನ್ನು ಮಾರಿ ಸಿದ್ದರಾಮಯ್ಯನವರ ಚುನಾವಣಾ ವೆಚ್ಚಕ್ಕೆ ಹಣ ನೀಡುತ್ತೇವೆ ಜೊತೆಗೆ ತಮ್ಮ ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಸೇರಿ ಸಿದ್ದರಾಮಯ್ಯನವರ ಗೆಲುವಿಗೆ ಪ್ರಯತ್ನ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಇದರ ಮಧ್ಯೆ ಪುಟ್ಟ ಬಾಲಕಿಯೊಬ್ಬಳು ಸಿದ್ಧರಾಮಯ್ಯನವರಿಗೆ 5,000 ರೂಪಾಯಿಗಳನ್ನು ನೀಡಲು ಮುಂದಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಸಿಂಧಗಿಯಲ್ಲಿ ಶನಿವಾರ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಪ್ರಜಾ ಧ್ವನಿ ಯಾತ್ರೆ ಸಮಾವೇಶದಲ್ಲಿ ಈ ಘಟನೆ ನಡೆದಿದೆ.

ಸಿದ್ದರಾಮಯ್ಯನವರು ವೇದಿಕೆ ಮೇಲೆ ಕುಳಿತಿದ್ದ ವೇಳೆ ಸಿಂಧಗಿ ಪಟ್ಟಣದ ಇಂದಿರಾಗಾಂಧಿ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಜಿಯಾ ರಫೀಕ ಮಣೂರ ತಾನು ಕೂಡಿಟ್ಟಿದ್ದ ಹಣವನ್ನು ಕೊಡಲು ಮುಂದಾಗಿದ್ದಾಳೆ. ಈ ಸಂದರ್ಭದಲ್ಲಿ ಆಕೆಗೆ ಅದನ್ನು ಮರಳಿಸಿದ ಸಿದ್ದರಾಮಯ್ಯನವರು ಶೈಕ್ಷಣಿಕ ವೆಚ್ಚಕ್ಕೆ ಬಳಸಿಕೊಳ್ಳುವಂತೆ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read