ಎಲೋನ್ ಮಸ್ಕ್ ಟ್ವಿಟರ್ ಅನ್ನು ವಹಿಸಿಕೊಂಡಾಗಿನಿಂದ, ಸಾಮಾಜಿಕ ಮಾಧ್ಯಮ ವೇದಿಕೆಯು ಕೆಲವು ಬದಲಾವಣೆಗಳನ್ನು ಕಂಡಿದೆ. ಈ ಬದಲಾವಣೆಗಳಲ್ಲಿ ಒಂದು “ವೀಕ್ಷಣೆಗಳ” ಎಣಿಕೆಯಾಗಿದೆ. ಟ್ವೀಟ್‌ಗಳನ್ನು ಎಷ್ಟು ಜನರು ವೀಕ್ಷಿಸುತ್ತಿದ್ದಾರೆ ಎಂಬುದರ ಕುರಿತು ಇದು ಮಾಹಿತಿ ನೀಡಲಿದೆ.
ಟ್ವಿಟರ್‌ಗೆ ಇತ್ತೀಚಿನ ಬದಲಾವಣೆಗಳು ಅದರ ವ್ಯಾಪ್ತಿಯನ್ನು ಕಡಿಮೆಗೊಳಿಸಿವೆ ಎಂದು ಮಸ್ಕ್ ಬಳಕೆದಾರರಿಂದ ಹಲವಾರು ದೂರುಗಳನ್ನು ಸ್ವೀಕರಿಸಿದ ನಂತರ ಇಂಥದ್ದೊಂದು ಚಿಂತನೆ ನಡೆಸಿದ್ದಾರೆ.
ಎಲೋನ್ ಮಸ್ಕ್, ಟ್ವಿಟರ್‌ನ ಪ್ರಧಾನ ಕಚೇರಿಯಲ್ಲಿ ಎಂಜಿನಿಯರ್‌ಗಳು ಮತ್ತು ಸಲಹೆಗಾರರ ಜೊತೆ ನಡೆಸಿದ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. 100 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರೂ, ಹತ್ತಾರು ಸಾವಿರ ಕಮೆಂಟ್ಸ್ ಮಾತ್ರ ಬರುತ್ತಿರುವುದು ಏಕೆ ಎಂಬ ಬಗ್ಗೆ ಹಲವರು ಪ್ರಶ್ನಿಸಿದ್ದರು. ಇದರಿಂದ ಟ್ವಿಟರ್ ಅನ್ನು ಇನ್ನೂ ಎತ್ತರಕ್ಕೆ ಒಯ್ಯುವ ನಿಟ್ಟಿನಲ್ಲಿ ಬದಲಾವಣೆ ಮಾಡಲು ಮಸ್ಕ್ ಮುಂದಾಗಿದ್ದಾರೆ.
ಅಂದಹಾಗೆ ಟ್ವಿಟರ್ ಅನ್ನು ಮಸ್ಕ್ ವಹಿಸಿಕೊಂಡಾಗಿನಿಂದ ಜನಪ್ರಿಯತೆ ಕುಸಿತವಾಗಿದೆ. ಈ ಬಗ್ಗೆ ಹಲವಾರು ದೂರುಗಳು ಬರುತ್ತಿವೆ. ಮಸ್ಕ್ ಮೊದಲು ಮಾಡಿದ್ದ ಕೆಲಸವೆಂದರೆ ಟ್ವಿಟರ್ನಲ್ಲಿ ಸಹಸ್ರಾರು ಮಂದಿ ಸಿಬ್ಬಂದಿಯನ್ನು ವಜಾಗೊಳಿಸಿದ್ದು. ಇವೆಲ್ಲವುಗಳ ಪರಿಣಾಮವನ್ನು ಈಗ ಎದುರಿಸಲಾಗುತ್ತಿದೆ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.