HomeIndiaಗಾಲಿ ಕುರ್ಚಿಯ ಮೂಲಕ ಜೊಮ್ಯೋಟೊ ಬಾಯ್ ಡೆಲಿವರಿ; ಅಂಗವೈಕಲ್ಯತೆ ಮೆಟ್ಟಿ ನಿಂತ ಯುವಕನಿಗೆ ಶ್ಲಾಘನೆಗಳ ಮಹಾಪೂರ

ಗಾಲಿ ಕುರ್ಚಿಯ ಮೂಲಕ ಜೊಮ್ಯೋಟೊ ಬಾಯ್ ಡೆಲಿವರಿ; ಅಂಗವೈಕಲ್ಯತೆ ಮೆಟ್ಟಿ ನಿಂತ ಯುವಕನಿಗೆ ಶ್ಲಾಘನೆಗಳ ಮಹಾಪೂರ

ಜೀವನದಲ್ಲಿ ಸಾಧಿಸುವ ಗುರಿಯಿದ್ದರೆ ಏನು ಬೇಕಾದರೂ ಮಾಡಬಹುದು. ಅಂಥದ್ದೇ ಒಂದು ವಿಡಿಯೋವನ್ನು ಹಿಮಾಂಶು ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮೋಟಾರು ಚಾಲಿತ ಗಾಲಿ ಕುರ್ಚಿಯ ಮೇಲೆ ಕುಳಿತಿರುವ ವ್ಯಕ್ತಿಯೊಬ್ಬ ಜೊಮ್ಯಾಟೊ ಡೆಲಿವರಿ ಬಾಯ್​ ಆಗಿರುವುದನ್ನುಇದು ತೋರಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೊಮ್ಯಾಟೊ ಟೀ ಶರ್ಟ್ ಧರಿಸಿ, ಡೆಲಿವರಿ ಏಜೆಂಟ್ ಆಗುತ್ತಿದ್ದೇನೆ ಎಂದು ಈ ಯುವಕನಿಗೆ ತಿಳಿದಾಗ ಆತನ ಮೊಗದಲ್ಲಿ ಪ್ರಕಾಶಮಾನವಾದ ನಗುವನ್ನು ಮಿನುಗುವುದನ್ನು ನೋಡಬಹುದು.

ಈ ವಿಡಿಯೋದಲ್ಲಿ ದೀಪಗಳು ಹಸಿರು ಬಣ್ಣಕ್ಕೆ ತಿರುಗಿದ ನಂತರ ಮತ್ತು ಟ್ರಾಫಿಕ್ ಚಲಿಸಲು ಪ್ರಾರಂಭಿಸಿದ ನಂತರ ಡೆಲಿವರಿ ಏಜೆಂಟ್​ನನ್ನು ಜೂಮ್ ಮಾಡಿ ತೋರಿಸಲಾಗಿದೆ. ಆಗ ಆತ ಗಾಲಿಕುರ್ಚಿಯ ಮೇಲೆ ಕುಳಿತಿರುವುದನ್ನು ನೋಡಬಹುದು.

ಅನೇಕ ಮಂದಿ ಈತ ಎಲ್ಲರಿಗೂ ಸ್ಫೂರ್ತಿ ಎಂದು ಬರೆದಿದ್ದಾರೆ. ಗಾಲಿಕುರ್ಚಿಯ ಬೆಲೆಯನ್ನು ಕಡಿತಗೊಳಿಸುವುದರಿಂದ ಕಂಪನಿಯನ್ನು ಹಲವರು ಶ್ಲಾಘಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular