ನವದೆಹಲಿ: ಫೆಬ್ರವರಿ 14 ರಂದು ಹಸುಗಳನ್ನು ತಬ್ಬಿಕೊಳ್ಳುವಂತೆ ಹಸು ಪ್ರೇಮಿಗಳಿಗೆ ಮನವಿ ಮಾಡಿದ ಕೆಲವೇ ದಿನಗಳಲ್ಲಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ(ಎಡಬ್ಲ್ಯೂಬಿಐ) ಫೆಬ್ರವರಿ 14 ಅನ್ನು ‘ಹಸು ಹಗ್ ಡೇ’ ಎಂದು ಆಚರಿಸುವ ಮನವಿಯನ್ನು ಹಿಂಪಡೆದಿದೆ.
ಸಕ್ಷಮ ಪ್ರಾಧಿಕಾರ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ನಿರ್ದೇಶನದಂತೆ 14 ಫೆಬ್ರವರಿ 2023 ರಂದು ಹಸು ಅಪ್ಪುಗೆಯ ದಿನವನ್ನು ಆಚರಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ನೀಡಿದ ಮನವಿಯನ್ನು ಹಿಂಪಡೆಯಲಾಗಿದೆ ಎಂದು ಸಲಹಾ ಮಂಡಳಿಯು ಹೊಸ ಸೂಚನೆಯಲ್ಲಿ ತಿಳಿಸಿದೆ. .
ಹಿಂದಿನ ಸೂಚನೆಯಲ್ಲಿ, AWFI ಹಸುವನ್ನು ತಬ್ಬಿಕೊಳ್ಳುವುದು ಭಾವನಾತ್ಮಕ ಶ್ರೀಮಂತಿಕೆ ತರುತ್ತದೆ ಮತ್ತು ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷ ಹೆಚ್ಚಿಸುತ್ತದೆ ಎಂದು ಹೇಳಿತ್ತು. ಇದೀಗ ನೀಡಲಾಗಿದ್ದ ಕರೆಯನ್ನು ಮಂಡಳಿ ಹಿಂಪಡೆದುಕೊಂಡಿದೆ.