ಕೋಟಿ ಕೋಟಿ ಹಣದ ಆಸೆಗೆ ಕೊಲೆ ಮಾಡುವ ಸುದ್ದಿ ಕೇಳಿರ್ತಿರಾ. ಯಾವತ್ತಾದ್ರೂ ಚಿಲ್ಲರೆ ಹಣದ ಆಸೆಗೆ ಕೊಲೆಗಳು ನಡೆದಿರುವ ಸುದ್ದಿ ಕೇಳಿದ್ದಿರಾ? ಆ ರೀತಿಯ ಕೊಲೆಗಳೇ ನಡೆದಿಲ್ಲ ಅಂತ ಹೇಳೋದಕ್ಕೆ ಹೋಗ್ಬೇಡಿ. ಯಾಕಂದ್ರೆ ಚಿಲ್ಲರೆ ಹಣಕ್ಕಾಗಿ ಹೆಣಗಳು ಉರುಳಿರುವ ಘಟನೆ ಅದೆಷ್ಟೋ ನಡೆದಿವೆ. ಇತ್ತಿಚೆಗೆ ಬಿಹಾರ್ನಲ್ಲಿಯೂ ಕೇವಲ 80 ರೂಪಾಯಿಗಾಗಿ ಓರ್ವ ವ್ಯಕ್ತಿಯ ಕೊಲೆ ಯತ್ನ ನಡೆದಿದೆ.
ಈ ಘಟನೆ ಬಿಹಾರ್ನ ಸಿವಾನ್ ಜಿಲ್ಲೆಯ ಪೊಖರಾ ಗ್ರಾಮದಲ್ಲಿ ನಡೆದಿದ್ದು, ಕೇವಲ 80 ರೂಪಾಯಿಗಾಗಿ ನಡೆದ ಈ ಬಿಎಸ್ಎಫ್ ಯೋಧ, ಗುಂಡು ಹಾರಿಸಿದ್ದಾನೆ ಎಂದು ಹೇಳಲಾಗಿದೆ. ಘಟನೆಯ ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು ಗಾಯಾಳು ಮುನ್ನಿಲಾಲ್ ರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಬಿಎಸ್ಎಫ್ ಯೋಧನನ್ನ ಪ್ರಜ್ವಲ್ ಪಾಂಡೆ ಎಂದು ಗುರುತಿಸಲಾಗಿದ್ದು, ಗುಂಡೇಟು ತಿಂದ ವ್ಯಕ್ತಿಯ ಕುಟುಂಬದವರು ಕೊಟ್ಟ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ. ಆತನಿಂದ ಬಂದೂಕು, ನಾಲ್ಕು ಕಾಟ್ರಿಡ್ಜ್, ಮ್ಯಾಗಜಿನ್ಗಳು ಹಾಗೂ ಒಂದು ಬೈಕ್ನ್ನ ವಶಪಡಿಸಿಕೊಳ್ಳಲಾಗಿದೆ.
ಅಸಲಿಗೆ ಆರೋಪಿ ಉಜ್ವಲ್ ಪಾಂಡೆ ಪೊಖರಾ ಗ್ರಾಮದಲ್ಲಿ ಇರುವ ಮಧ್ಯದಂಗಡಿಗೆ ಹೋಗಿ ಅಲ್ಲಿ ತಾಡಿ(ಒಂದು ಪ್ರಕಾರದ ಮದ್ಯ) ಕುಡಿಯಲು ಹೋಗಿದ್ದಾನೆ. ತಾಡಿ ಕುಡಿದ ನಂತರ ನಶೆಯಲ್ಲಿದ್ದ ಆತನಿಗೆ ಮುನ್ನಿಲಾಲ್ 80 ರೂಪಾಯಿಯನ್ನ ಕೇಳಿದ್ದಾನೆ. ತನ್ನ ಬಳಿ ದುಡ್ಡು ಕೇಳಿದ ಅನ್ನೊ ಕ್ಷುಲ್ಲಕ ಕಾರಣಕ್ಕೆನೇ ಉಜ್ವಲ್ ಪಾಂಡೆ ಮುನ್ನಿಲಾಲ್ ಮೇಲೆ ಮೂರು ಬಾರಿ ಗುಂಡನ್ನ ಹಾರಿಸಿದ್ದಾನೆ.
ಅಲ್ಲಿದ್ದ ಗ್ರಾಹಕರೇ ಸ್ಥಳೀಯ ಸಿವಾನ್ ಸದರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ಸದ್ಯಕ್ಕೆ ಗಾಯಾಳು ಮುನ್ನಿಲಾಲ್ ಚೇತರಿಸಿಕೊಂಡಿದ್ದು, ಈಗ ಮುಂದಿನ ಕ್ರಮವಾಗಿ ಉಜ್ವಲ್ ಪಾಂಡೆಯನ್ನ ಬಂಧಿಸಲಾಗಿದೆ ಎಂದು ಮಹರಾಜ್ ಗಂಜ್ನ ಎಸ್ಡಿಪಿಒ ಮಾಧ್ಯಮಕ್ಕೆ ಹೇಳಿದ್ದಾರೆ.