329 ಕೋಟಿ ರೂ. ಲಾಟರಿ ಗೆದ್ದ ವಿಷಯ ತಿಳಿಯುತ್ತಲೇ ಮಹಿಳೆಗೆ ಬಂತು ಜ್ವರ…..!

ಲಾಟರಿ ಗೆಲ್ಲುವುದು ಹಲವರ ಕನಸಾಗಿರುತ್ತದೆ, ಏಕೆಂದರೆ ಲಾಟರಿ ಟಿಕೆಟ್‌ಗಳನ್ನು ಖರೀದಿಸುವ ಬಹಳಷ್ಟು ಜನರು ಬಹುಮಾನದ ಹಣವನ್ನು ಪಡೆಯುವ ಅದೃಷ್ಟವನ್ನು ಪಡೆಯುವುದಿಲ್ಲ. ಬಹುಮಾನದ ಮೊತ್ತವು ಸಾಕಷ್ಟು ದೊಡ್ಡದಾಗಿದ್ದರೆ ಲಾಟರಿಗಳು ನಿಮ್ಮ ಜೀವನವನ್ನು ಉತ್ತಮವಾಗಿ ಬದಲಾಯಿಸುವ ಅವಕಾಶವಾಗಿದೆ.

ಇಲ್ಲೊಬ್ಬ ಆಸ್ಟ್ರೇಲಿಯನ್​ ಮಹಿಳೆ $ 40 ಮಿಲಿಯನ್ (ಸುಮಾರು 329 ಕೋಟಿ ರೂ) ಜಾಕ್‌ಪಾಟ್ ಗೆದ್ದಿದ್ದಾಳೆ! ಆಸ್ಟ್ರೇಲಿಯಾದ ಉತ್ತರ ವಿಕ್ಟೋರಿಯಾ ಪ್ರದೇಶದ ಮಹಿಳೆ $40 ಮಿಲಿಯನ್ ಲೊಟ್ಟೊ ಜಾಕ್‌ಪಾಟ್ ಗೆದ್ದಿದ್ದಾರೆ. ಫೆಬ್ರವರಿ 2ರಂದು ಲಾಟರಿ ಸಂಘಟಕರು ಆಕೆಗೆ ಕರೆ ಮಾಡಿ ಹೇಳಿದಾಗ, ಮಹಿಳೆ ಯಾವುದೋ ಫೇಕ್​ ಕಾಲ್​ ಎಂದುಕೊಂಡಿದ್ದಾರೆ.

ಮೋಸದ ಕರೆಗಳು ಬರುವುದು ಸರ್ವೇ ಸಾಮಾನ್ಯವಾಗಿದ್ದರಿಂದ ಆಕೆ ಫೋನ್​ ಕರೆಯನ್ನು ಕಟ್​ ಮಾಡಿದ್ದಾಳೆ. ಲಾಟರಿ ಸಂಘಟಕರು ಮಹಿಳೆಯ ಮನಸ್ಸನ್ನು ಕೊನೆಗೂ ಒಲಿಸಿ ಗೆದ್ದಿರುವ ವಿಷಯ ತಿಳಿಸಿದಾಗ, ಮಹಿಳೆ ಹೌಹಾರಿಹೋಗಿದ್ದಾಳೆ! ವಿಷಯ ತಿಳಿದ ದಿನ ಇಡೀ ರಾತ್ರಿ ನಿದ್ದೆ ಬರಲಿಲ್ಲ, ಜ್ವರ ಬಂದ ಅನುಭವವಾಗಿತ್ತು. ಇದು ನಿಜವೋ, ಸುಳ್ಳೋ ತಿಳಿಯದೇ ಬೆಚ್ಚಿಬಿದ್ದಿದ್ದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read