alex Certify BIG NEWS: ಪ್ರಹ್ಲಾದ್ ಜೋಶಿ ಮಹಾರಾಷ್ಟ್ರದ ಪೇಶ್ವೆಗಳ ವಂಶಸ್ಥರಿಗೆ ಸೇರಿದವರು; RSS ಅವರನ್ನು ಸಿಎಂ ಮಾಡುವ ಹುನ್ನಾರ ನಡೆಸಿದೆ; ಮಾಜಿ ಸಿಎಂ HDK ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪ್ರಹ್ಲಾದ್ ಜೋಶಿ ಮಹಾರಾಷ್ಟ್ರದ ಪೇಶ್ವೆಗಳ ವಂಶಸ್ಥರಿಗೆ ಸೇರಿದವರು; RSS ಅವರನ್ನು ಸಿಎಂ ಮಾಡುವ ಹುನ್ನಾರ ನಡೆಸಿದೆ; ಮಾಜಿ ಸಿಎಂ HDK ವಾಗ್ದಾಳಿ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಕೆಸರೆರಚಾಟ ಜೋರಾಗಿದೆ. ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಜನಸ್ಪಂದನೆ ಕಂಡು ಬಿಜೆಪಿ ನಾಯಕರಿಗೆ ಭಯ ಶುವಾಗಿದೆ. ಹಾಗಾಗಿ ನಮ್ಮ ಪಕ್ಷದ ಬಗ್ಗೆ, ಕುಟುಂಬದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ಪಂಚರತ್ನ ರಥಯಾತ್ರೆಗೆ ನವಗ್ರಹ ಯಾತ್ರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಜೋಶಿಯವರು ಕರ್ನಾಟಕದ ಬ್ರಾಹ್ಮಣರಲ್ಲ, ಮಹಾರಾಷ್ಟ್ರದ ಪೇಶ್ವೆಗಳ ವಂಶಸ್ಥರು. ಅವರನ್ನು ಮುಂದಿನ ಸಿಎಂ ಮಾಡಲು ಆರ್ ಎಸ್ ಎಸ್ ಹುನ್ನಾರ ನಡೆಸಿದೆ. ರಾಜ್ಯದ ಜನತೆ ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದಾರೆ.

ಆರ್ ಎಸ್ ಎಸ್ ನವರು ಪ್ರಹ್ಲಾದ್ ಜೋಶಿ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಲು ಹುನ್ನಾರ ನಡೆಸಿದ್ದಾರೆ. ಜೋಶಿ ನಮ್ಮ ದಕ್ಷಿಣ ಕರ್ನಾಟಕ ಸಂಸ್ಕೃತಿಯ ಬ್ರಾಹ್ಮಣರಲ್ಲ, ಬ್ರಾಹ್ಮಣ ವೃತ್ತಿ ಸಂಸ್ಕಾರದಲ್ಲಿ 2-3 ರೀತಿ ಇದೆ. ಹಳೇ ಕರ್ನಾಟಕದ ಬ್ರಾಹ್ಮಣರು ಸರ್ವೇಜನೋ ಸುಖಿನೋ ಭವಂತು ಎಂದು ಹೇಳುತ್ತಾರೆ. ಆದರೆ ಇವರು ಹಾಗೆ ಹೇಳುವುದಿಲ್ಲ. ಪ್ರಹ್ಲಾದ್ ಜೋಶಿ ಮಹಾರಾಷ್ಟ್ರದ ಭಾಗದ ಪೇಶ್ವೆಗಳ ವಂಶಸ್ಥರಿಗೆ ಸೇರಿದವರು. ಶೃಂಗೇರಿ ಮಠವನ್ನು ಒಡೆದಿರುವ ಗುಂಪಿಗೆ ಸೇರಿದವರು. ಇವರು ಶಂಕರಾಚಾರ್ಯರನ್ನು ಹೊಡೆದು ಓಡಿಸಿದವರು. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಕೊಂದಿರುವವರ ವರ್ಗಕ್ಕೆ ಸೇರಿದವರು ಎಂದು ಆರೋಪಿಸಿದ್ದಾರೆ.

ಪ್ರಹ್ಲಾದ್ ಜೋಶಿಯವರನ್ನು ಆರ್ ಎಸ್ ಎಸ್ ನವರು ಸಿಎಂ ಮಾಡಲು ಚಿಂತನೆ ನಡೆಸುತ್ತಿದ್ದಾರೆ. ಹಾಗಾಗಿ ರಾಜ್ಯದ ಜನತೆ ಸ್ವಲ್ಪ ಎಚ್ಚೆತ್ತುಕೊಳ್ಳಬೇಕಿದೆ. ಇದೇ ಕಾರಣಕ್ಕಾಗಿ ಜೋಶಿ ನಮ್ಮೆಲ್ಲರ ಮೇಲೆ ಪ್ರಹಾರ ಮಾಡಲು ಹೊರಟಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...