ಭಾರತದಲ್ಲಿ ಹಲ್ಲಿನ ಸಮಸ್ಯೆಗಳನ್ನು ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ. ಇಲ್ಲಿ ಅನೇಕರಿಗೆ ವಸಡಿನ ಕಾಯಿಲೆ ಇದೆ. ಆದರೆ ಅದನ್ನು ನಿರ್ಲಕ್ಷಿಸುತ್ತಾರೆ. ಹಲ್ಲಿನ ಸೆನ್ಸಿಟಿವಿಟಿ ಕೂಡ ಮತ್ತೊಂದು ದೊಡ್ಡ ಸಮಸ್ಯೆ. ಆದರೆ ಕೆಲವೇ ಕೆಲವು ಜನರು ಮಾತ್ರ ದಂತವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುತ್ತಾರೆ. ಅನೇಕರಿಗೆ ಮದ್ಯಪಾನ ಮತ್ತು ಧೂಮಪಾನದ ಚಟವಿರುತ್ತದೆ. ಇದು ಹಲ್ಲುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಗ್ರಾಮೀಣ ಭಾಗದವರಲ್ಲಿ ಹಲ್ಲಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.
ನಗರಗಳಲ್ಲಿ ಜಂಕ್ ಫುಡ್ ಮತ್ತು ಇತರ ಕೆಲವು ಅನಾರೋಗ್ಯಕರ ಜೀವನಶೈಲಿಯಿಂದ ಹಲ್ಲಿನ ಸಮಸ್ಯೆಗಳು ಉದ್ಭವಿಸುತ್ತವೆ. ಅನಾರೋಗ್ಯಕರ ಆಹಾರ ಮತ್ತು ಆಹಾರದಲ್ಲಿ ಹೆಚ್ಚಿನ ಸಕ್ಕರೆಯಿಂದಾಗಿ ಜನರು ಹಲ್ಲಿನ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹಲ್ಲುಗಳಲ್ಲಿ ಸಣ್ಣದೊಂದು ಸಮಸ್ಯೆ ಇದ್ದರೂ ನಿರ್ಲಕ್ಷಿಸಬಾರದು ಮತ್ತು ಸಾಧ್ಯವಾದಷ್ಟು ಬೇಗ ದಂತವೈದ್ಯರನ್ನು ಭೇಟಿ ಮಾಡಬೇಕು. ಹಲ್ಲುನೋವು, ಒಸಡುಗಳಲ್ಲಿ ರಕ್ತಸ್ರಾವ ಮತ್ತು ಹಲ್ಲಿನ ಸೆನ್ಸಿಟಿವಿಟಿ ಬಹಳ ತೊಂದರೆ ಉಂಟುಮಾಡುತ್ತವೆ.
ಮಕ್ಕಳಲ್ಲಿ ಕೂಡ ಹಲ್ಲಿನ ಸಮಸ್ಯೆಗಳು ಸಹ ಸಾಮಾನ್ಯವಾಗಿದೆ. ಬಾಟಲ್ ಫೀಡ್‌ನಿಂದಲೂ ಹಲ್ಲುಗಳಲ್ಲಿ ಸಮಸ್ಯೆ ಉಂಟಾಗುತ್ತದೆ. ಮಕ್ಕಳು ಮುಂಭಾಗದ ನಾಲ್ಕು ಹಾಲಿನ ಹಲ್ಲುಗಳನ್ನು ಕಳೆದುಕೊಳ್ಳುತ್ತಾರೆ. ಹಾಲಿನ ಬಾಟಲಿಯು ಮಕ್ಕಳ ಹಲ್ಲುಗಳನ್ನು ಕೆಡಿಸುತ್ತದೆ. ಪ್ರತಿ ಆಹಾರದ ನಂತರ ತಾಯಂದಿರು ಮಗುವಿನ ಒಸಡುಗಳು ಮತ್ತು ಹಲ್ಲುಗಳನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಬೇಕು. ನಿರ್ಲಕ್ಷಿಸಿದರೆ ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಳು ಬರುತ್ತವೆ. ಉತ್ತಮ ಪರಿಹಾರವೆಂದರೆ ಬಾಟಲ್ ಫೀಡಿಂಗ್ ಮಾಡದೇ ಇರುವುದು.
ಹಲ್ಲು ಹಾಳಾಗದಂತೆ ತಡೆಯಲು ಮಾರ್ಗಗಳು
1. ದಿನಕ್ಕೆ ಎರಡು ಬಾರಿ ಬ್ರಷ್ ಮಾಡಿ.
2. ಫ್ಲೋಸಿಂಗ್ ಮೂಲಕ ಬ್ರಷ್ ತಲುಪಲು ಸಾಧ್ಯವಾಗದ ಬಿರುಕುಗಳನ್ನು ಸ್ವಚ್ಛಗೊಳಿಸಿ.
3. ಹೆಚ್ಚು ಸಕ್ಕರೆ ತಿನ್ನುವುದನ್ನು ತಪ್ಪಿಸಿ. ಪಿಷ್ಟದ ಆಹಾರವೂ ಹಲ್ಲಿನ ಕೊಳೆಯುವಿಕೆಗೆ ಕಾರಣವಾಗಬಹುದು.
4. ನಾಲಿಗೆಯನ್ನು ಸಹ ನಿಯಮಿತವಾಗಿ ಸ್ವಚ್ಛಗೊಳಿಸಿ.
5. ಯಾವುದೇ ಅಸಾಮಾನ್ಯ ಚಿಹ್ನೆಗಳನ್ನು ನಿರ್ಲಕ್ಷಿಸಬೇಡಿ. ಒಸಡುಗಳಲ್ಲಿ ಊತ ಅಥವಾ ರಕ್ತಸ್ರಾವ ಇದ್ದರೆ ದಂತವೈದ್ಯರನ್ನು ಸಂಪರ್ಕಿಸಿ.
6. ಪ್ರತಿ 6 ತಿಂಗಳಿಗೊಮ್ಮೆ ನಿಮ್ಮ ಹಲ್ಲುಗಳನ್ನು ಪರೀಕ್ಷಿಸಿ. ಹಲ್ಲುಗಳನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ.