ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ನಡೆಸಿದ ವಿಶ್ವ ಜನಪ್ರಿಯ ನಾಯಕರ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಶೇಕಡಾ 78 ರಷ್ಟು ರೇಟಿಂಗ್ ಪಡೆದುಕೊಳ್ಳುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.
ಮೆಕ್ಸಿಕೋ ಅಧ್ಯಕ್ಷ ಲೊಪೆಜ್ ಒಬ್ರಾಡಾರ್ ಎರಡನೇ ಸ್ಥಾನದಲ್ಲಿದ್ದು ಅವರಿಗೆ ಶೇಕಡಾ 68 ರಷ್ಟು ರೇಟಿಂಗ್ ಲಭ್ಯವಾಗಿದೆ. ಇನ್ನು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬಾನಿಸ್ ಅವರಿಗೆ ಶೇಕಡ 58 ರಷ್ಟು ರೇಟಿಂಗ್ ಲಭಿಸಿದೆ.
ಮಹತ್ವದ ಸಂಗತಿ ಎಂದರೆ ಅಮೆರಿಕ ಅಧ್ಯಕ್ಷ ಜೋ ಬೈಡನ್ 6ನೇ ಸ್ಥಾನದಲ್ಲಿದ್ದು, ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡು 7ನೇ ಸ್ಥಾನದಲ್ಲಿದ್ದಾರೆ. ಇನ್ನು ಬ್ರಿಟನ್ ಪ್ರಧಾನಿ ರಿಷಿ ಸುನಾಕ್ 16ನೇ ಸ್ಥಾನದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇವರನ್ನೆಲ್ಲರನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದ್ದಾರೆ.